ಹಳಿಯಾಳ/ಶಿರಸಿ  : ಮನೆಯಿಂದ ಹೊರಹೋದ ಇಬ್ಬರು ನಾಪತ್ತೆಯಾಗಿರುವ (Missing) ಪ್ರತ್ಯೇಕ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ನಡೆದಿದೆ. ಹಳಿಯಾಳ (Haliyal) ಮತ್ತು ಶಿರಸಿ (Sirsi) ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಳಿಯಾಳ ತಾಲೂಕಿನ ಅಮ್ಮನಕೊಪ್ಪದ ಕೃಷಿಕ ರಾಮ ಭೂಪತಿ ಭಾಂಗಡಿ (೩೫)  ಅ.೧೭ರಂದು ಬೆಳಿಗ್ಗೆ ೧೦.೩೦ರಿಂದ ಕಾಣೆಯಾಗಿದ್ದಾರೆ (Missing). ಅಳ್ನಾವರಕ್ಕೆ ಹೋಗಿ ಬರುವುದಾಗಗಿ ಮನೆಯಿಂದ ಹೋದವನು ಮರಳಿ ಬಂದಿಲ್ಲ. ಮನೆಯವರು ಮತ್ತು ಸ್ನೇಹಿತರೆಲ್ಲರೂ ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿಲ್ಲ ಎಂದು ಸಹೋದರ ಗೋವಿಂದ ಭೂಪತಿ ಭಾಂಗಡಿ  ದೂರು ದಾಖಲಿಸಿದ್ದಾರೆ (Case Registered).

ಇದನ್ನೂ ಓದಿ : ಜಾನುವಾರು ಮೈ ತೊಳೆಯಲು ಹೋದವ ನೀರುಪಾಲು

ಇನ್ನೊಂದು ಪ್ರಕರಣದಲ್ಲಿ, ಶಿರಸಿ ಗಣೇಶ ನಗರದ ಗೌಂಡಿ ಕೆಲಸ ಮಾಡುತ್ತಿದ್ದ ಅಡಿವೆಪ್ಪ ತಿಮ್ಮಣ್ಣ ಭೋವಿವಡ್ಡರ (೪೨) ಕಾಣೆಯಾಗಿದ್ದಾರೆ. ಅ.೭ರಂದು ಮಧ್ಯಾಹ್ನ ೨ ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು. ಈವರೆಗೂ ಮರಳಿ ಬಂದಿಲ್ಲ ಎಂದು ಪತ್ನಿ ಮಂಜುಳಾ ಭೋವಿವಡ್ಡರ ದೂರು ದಾಖಲಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಗೋ ಅಪಹರಣ ತಡೆಗಟ್ಟಲು ಸಾರ್ವಜನಿಕರ ಆಗ್ರಹ