ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಂ.ಎಂ.ನಾಯ್ಕ(MM Naik) ಜಾಲಿ ನಿನ್ನೆ ರಾತ್ರಿ (ಜುಲೈ ೨೬) ನಿಧನರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ೧೧.೩೦ರ ಸುಮಾರಿಗೆ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ.
ಇದನ್ನೂ ಓದಿ : ಕುಮಟಾದಲ್ಲಿ Target POK Run
ಗುತ್ತಿಗೆದಾರರಾಗಿದ್ದ ಇವರು ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಸಹಕಾರ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು. ಜಾಲಿ ಯುವಕ ಸಂಘದ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ : ಪದವಿ ಪೂರ್ವ ಉಪನಿರ್ದೇಶಕರಿಗೆ ಸನ್ಮಾನ
ಆರಂಭದಲ್ಲಿ ಕೆಲ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ನಂತರ ಬಿಜೆಪಿಯಲ್ಲಿ ಹಲವು ವರ್ಷ ವಿವಿಧ ಜವಾಬ್ದಾರಿ ವಹಿಸಿ, ಕೊನೆಯವರೆಗೂ ಬಿಜೆಪಿಯಲ್ಲೇ ಉಳಿದರು. ಎರಡು ಅವಧಿಗೆ ಗ್ರಾಮ ಪಂಚಾಯತ ಸದಸ್ಯರಾಗಿದ್ದರು. ನಂತರ ಬಿಜೆಪಿಯಿಂದ ಒಂದು ಅವಧಿಗೆ ಜಾಲಿ ಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದರು.
ಇದನ್ನೂ ಓದಿ : ಜುಲೈ ೨೬ರಂದು ವಿವಿಧೆಡೆಯ ಅಡಿಕೆ ಧಾರಣೆ
ಎಂ.ಎ.ನಾಯ್ಕ (MM Naik) ಅವರು ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಜಾಲಿ ಜಿವಿಎಸ್ ಬ್ಯಾಂಕ್ ನಿರ್ದೇಶಕರಾಗಿ, ಭಟ್ಕಳ ಪಿ ಎಲ್ ಡಿ ಬ್ಯಾಂಕ್ ಭಟ್ಕಳ ನಿರ್ದೇಶಕರಾಗಿ.. ಹೀಗೆ ಅನೇಕ ಸಂಘ ಸoಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಎಂ.ಎ.ನಾಯ್ಕ ಅವರ ನಿಧನಕ್ಕೆ ಜಾಲಿಯ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ ಸಂಘ ಕಂಬನಿ ಮಿಡಿದಿದೆ.