ಭಟ್ಕಳ (Bhatkal) : ಕರಾವಳಿ ಕರ್ನಾಟಕ (Coastal Karnataka) ಮತ್ತು ಮುಂಬೈ (Mumbai) ನಡುವಿನ ಪ್ರಯಾಣಿಕರಿಂದ ಅಪಾರ ಪ್ರೀತಿಗೆ ಪಾತ್ರವಾಗಿರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ (matsyagandha express) ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ (German Technology) ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ (LHB Coach) ಫೆ.೧೭ರಂದು ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ವರ್ಷ ದಕ್ಷಿಣ ರೈಲ್ವೆಯು (Southern Railway) ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ಪ್ರಸ್ತುತ ರೈಲು ಸಂಖ್ಯೆ ೧೬೩೪೭/೧೬೩೪೮ (ತಿರುವನಂತಪುರಂ ಸೆಂಟ್ರಲ್ – ಮಂಗಳೂರು ಸೆಂಟ್ರಲ್ (Mangaluru Central) ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ ೧೨೬೨೦/೧೨೬೧೯ ಮಂಗಳೂರು ಸೆಂಟ್ರಲ್ – ಲೋಕಮಾನ್ಯ ತಿಲಕ್ (ಟಿ) ಮತ್ಸ್ಯಗಂಧ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (matsyagandha express) ಅನ್ನು ಆಧುನಿಕವಾಗಿ ಬದಲಾಯಿಸಲಾಗುವುದು ಎಂದು ಘೋಷಿಸಿತ್ತು. ಮುಂಬೈ-ಮಂಗಳೂರು ನಡುವಿನ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ ಸಾಂಪ್ರದಾಯಿಕ ರೇಕ್‌ಗಳನ್ನು ಎಲ್‌ಎಚ್‌ಬಿಗೆ ಬದಲಾಯಿಸಲು ರೈಲ್ವೆ ಇಲಾಖೆ (Railway Department) ಮಂಜೂರು ಮಾಡಿದ್ದರಿಂದ ಬಹುಕಾಲದ ಬೇಡಿಕೆ ಈಡೇರಿದೆ.
ಇದನ್ನೂ ಓದಿ : Vardhanthi/ ಕಟ್ಟೆವೀರ ದೇವರ ವರ್ಧಂತ್ಯುತ್ಸವ ಸಂಪನ್ನ