ಭಟ್ಕಳ: ಬ್ಯಾಂಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ದೂರು (cyber complaint) ಕೊಟ್ಟ ನಂತರವೂ ಲಕ್ಷಾಂತರ ರೂಪಾಯಿ ಖಾತೆಯಿಂದ ಮಾಯವಾಗಿರುವ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಬೇಂಗ್ರೆ ಮಾವಿನತೋಳ ಗ್ರಾಮದ ಮಂಜುನಾಥ ಮಾಸ್ತಿ ಶೆಟ್ಟಿಮನೆ (೫೧) ಹಣ ಕಳೆದುಕೊಂಡವರು. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ಇದನ್ನು ಓದಿ: Mankal Vaidya/ ನರೇಗಾ ಮರುನಾಮಕರಣಕ್ಕೆ ಸಚಿವ ವೈದ್ಯ ಕೆಂಡಾಮಂಡಲ
ದೂರಿನಲ್ಲಿ ತಿಳಿಸಿರುವಂತೆ, “ಯಾರೋ ವ್ಯಕ್ತಿಗಳು ದಿನಾಂಕ: ೨೪-೧೨-೨೦೨೫ ರಂದು ಅವರ ಬ್ಯಾಂಕ ಖಾತೆಯನ್ನು ಹ್ಯಾಕ್ ಮಾಡಿ ಅವರ ಖಾತೆಯಲ್ಲಿ ಇದ್ದ ಹಣದಲ್ಲಿ ೯೦೦ ರೂ.ರಂತೆ ೩ ಬಾರಿಗೆ ಒಟ್ಟು ೨೭೦೦ ರೂ ಹಣವನ್ನು ಅವರಿಗೆ ಗೊತ್ತಿಲ್ಲದೇ ಕಟ್ಟ್ ಮಾಡಿಕೊಂಡಿದ್ದಾರೆ. ನಂತರ ಇದರ ಬಗ್ಗೆ ಅವರು ಸೈಬರ್ ದೂರು (cyber complaint) ನೀಡಿದ್ದರು. ದೂರಿನ ಹಿನ್ನೆಲೆ ಅವರ ಖಾತೆ ಪ್ರೀಜ್ ಆಗಿದ್ದರಿಂದ ದಿನಾಂಕ: ೨೬-೧೨-೨೦೨೫ ರಂದು ಬ್ಯಾಂಕಗೆ ಹೋಗಿ ಅವರ ಖಾತೆಯನ್ನು ಅನ್ ಫ್ರೀಜ್ ಮಾಡಿಸಿದಾಗ ಅದೇ ದಿನ ಸಂಜೆ ೭ ಗಂಟೆ ಸುಮಾರಿಗೆ ಅವರಿಗೆ ತಿಳಿಯದೇ ಅವರ ಖಾತೆಯಿಂದ ಮೊದಲ ಬಾರಿಗೆ ೧,೯೪,೦೦೦ ರೂ, ಎರಡನೇ ಬಾರಿಗೆ ೧,೯೫,೦೦೦ ರೂ ಹಾಗೂ ಮೂರನೇ ಬಾರಿಗೆ ೬೮,೦೦೦ ರೂ ಹಣ ಹೀಗೆ ಒಟ್ಟು ೪,೫೭,೦೦೦ ರೂ ಹಣ ಕಟ್ ಆಗಿದೆ. ತದ ನಂತರ ಅವರ ಖಾತೆಗೆ ೮,೦೦,೦೦೦ ರೂ ಜಮಾ ಆಗಿದ್ದು, ಪುನಃ ಮೊದಲ ಬಾರಿಗೆ ೧,೮೫,೦೦೦ ರೂ ಹಣ ಮತ್ತು ಎರಡನೇ ಬಾರಿಗೆ ೧,೫೮,೦೦೦ ರೂ ಹಣ ಹೀಗೆ ಒಟ್ಟು ಹಣ ೩,೪೩,೦೦೦ ಹಣ ಕಟ್ಟಾಗಿದ್ದು ಇರುತ್ತದೆ.
ಇದನ್ನು ಓದಿ: “YUVA–2026” ಎಂಬ ಸಂದೇಶ ಪ್ರತಿಬಿಂಬಿಸುವ ಮಾನವ ಸರಪಳಿ
ಯಾರೋ ಆರೋಪಿತರು ತನ್ನ ಎಸ್.ಬಿ.ಐ ಬ್ಯಾಂಕ ಖಾತೆಯನ್ನು ಕಂಪ್ಯೂಟರ್ ಸಾಧನವನ್ನು ಬಳಸಿಕೊಂಡು ತನಗೆ ಮೋಸ ಮಾಡುವ ಉದ್ದೇಶದಿಂದ ತನ್ನಂತೆಯೇ ನಟಿಸಿ ತನ್ನ ಎಲೆಕ್ಟಾçನಿಕ್ ರುಜುವಾತುಗಳನ್ನು ಬಳಸಿಕೊಂಡು ತನ್ನ ಖಾತೆಯನ್ನು ಹ್ಯಾಕ್ ಮಾಡಿ ತನ್ನ ಖಾತೆಯಲ್ಲಿ ಇದ್ದ ಒಟ್ಟು ೮,೦೨,೭೦೦ ರೂ ಹಣವನ್ನು ಖಾತೆಯಿಂದ ಕಟ್ ಮಾಡಿ ತನಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: AI course/ ಎ ಐ ಕೋರ್ಸ್ ಅನಾವರಣ



