ಭಟ್ಕಳ (Bhatkal): ಕಾರು ಡಿಕ್ಕಿಯಾಗಿ ಮೋಟಾರ್‌ ಸೈಕಲ್‌ ಸವಾರ ಗಾಯಗೊಂಡ ಘಟನೆ ಮುರುಡೇಶ್ವರದಲ್ಲಿ (Murdeshwar) ನಡೆದಿದೆ. ಹೋಟೆಲ್‌ವೊಂದರಲ್ಲಿ ಕ್ಲೀನರ್‌ ಆಗಿರುವ ಭಟ್ಕಳ ತಾಲೂಕಿನ ಕಾಯ್ಕಿಣಿ ಬಸ್ತಿಯ ಬಿದ್ರಮನೆ ನಿವಾಸಿ ನೀಲಕಂಠ ಜಟ್ಟಾ ನಾಯ್ಕ (೫೨) ಗಾಯಗೊಂಡವರು. ಫೆ.೨೧ರಂದು ಸಂಜೆ ೬ ಸುಮಾರಿಗೆ ಈ ಘಟನೆ ನಡೆದಿದ್ದು, ಫೆ.೨೫ರಂದು ಗಾಯಾಳು ಸಹೋದರ ಚಂದ್ರಶೇಖರ ಜಟ್ಟ ನಾಯ್ಕ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರುಡೇಶ್ವರ (Murudeshwar) ದೇವಸ್ಥಾನ ಕಡೆಯಿಂದ ನಾಕಾ ಕಡೆಗೆ ಮುರುಡೇಶ್ವರ ಮುಖ್ಯ ರಸ್ತೆಯಲ್ಲಿ ಎಕ್ಸಲ್‌ ಮೋಟಾರ್‌ ಸೈಕಲ್‌ ಚಲಾಯಿಸಿಕೊಂಡು ನೀಲಕಂಠ ನಾಯ್ಕ ಹೋಗುತ್ತಿದ್ದಾಗ ಕಾರು ಬಡಿದಿದೆ. ಕೇರಿ ರಸ್ತೆಯ ಮುಖಾಂತರ ಬಂದ ಕಾರು ಮುಖ್ಯ ರಸ್ತೆಯ ಕಲ್ಯಾಣಿ ಪಕ್ಕದಲ್ಲಿರುವ ಆಟೋ ನಿಲ್ದಾಣದ ಹತ್ತಿರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾರು ಚಾಲಕನಾದ ಮುರ್ಡೇಶ್ವರದ ಭಂಡಾರಿ ಗಾರ್ಡನ್‌ ಗೌಸಿಯಾ ಮೊಹಲ್ಲಾದ  ಮೊಹಮ್ಮದ್ ಅಮ್ಮಾರ್ ತಂದೆ ಮೊಹಮ್ಮದ್ ಶಬ್ಬೀರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ : Gathering/ ನಿವೃತ್ತರಿಗೆ, ಸಾಧಕರಿಗೆ ಸನ್ಮಾನ; ಮಕ್ಕಳಿಂದ ನೃತ್ಯ ವೈಭವ