ಭಟ್ಕಳ(Bhatkal): ವಿಶ್ವ ಪ್ರಸಿದ್ಧ ಮುರುಡೇಶ್ವರನ (Murudeshwar) ಸನ್ನಿಧಿಯಲ್ಲಿ ಶಿವನಿಗೆ ಲೋಕ ಕಲ್ಯಾಣರ್ಥವಾಗಿ ಪ್ರಧಾನ ಅರ್ಚಕರಾದ ಜಯರಾಮ ಅಡಿಗಳ ನೇತೃತ್ವದಲ್ಲಿ ಅರ್ಚಕರ ತಂಡಗಳಿಂದ ಲಕ್ಷ ಭಸ್ಮಾರ್ಚನೆ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಭಾಗದಲ್ಲಿ ಈ ರೀತಿಯ ಭಸ್ಮಾರ್ಚನೆ ವಿಶೇಷವಾಗಿದ್ದು. ಶ್ರಾವಣ ಮಾಸದ ಪುಣ್ಯ ಕಾಲದಲ್ಲಿ ದೇವಸ್ಥಾನದ ಅರ್ಚಕರೆಲ್ಲ ಸೇರಿ ಶಿವನಲ್ಲಿ ಸಂಕಲ್ಪಿಸಿ ಲೋಕಕ್ಕೆ ಬಂದಿರುವ ದೂರೀತ ಕಷ್ಟ ಕಾರ್ಪಣ್ಯಗಳು ಭಸ್ಮದಂತೆ ನಿವಾರಣೆಯಾಗಲಿ ಎನ್ನುವ ಸದುದ್ದೇಶದಿಂದ ಈ ಕೈಂಕರ್ಯ ನಡೆಸಲಾಗಿದೆ. ಇದು ಈ ಭಾಗದಲ್ಲಿ ಪ್ರಥಮ ಭಾರಿಗೆ ನಡೆದಿದೆ ಎಂದು ಪ್ರಧಾನ ಅರ್ಚರಾದ ಜಯರಾಮ ಅಡಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಜಾಲಿ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ