ಭಟ್ಕಳ (Bhatkal) : ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ಮುರುಡೇಶ್ವರ ಕಡಲ ತೀರಕ್ಕೆ (Murdeshwar beach) ಹೊಸ ವರ್ಷದ (New Year) ಮೊದಲ ದಿನದಂದು ಪ್ರವಾಸಿಗರಿಗೆ ತೆರಳಲು ಮುಕ್ತಮಾಡಿದ್ದಾರೆ. ಹೊಸ ವರ್ಷದ ಆಚರಣೆ ಬಳಿಕ ಜನವರಿ ೧ ಬುಧವಾರ ಸಂಜೆ ೫ ಗಂಟೆಯಿಂದ ಸುರಕ್ಷತಾ ಕ್ರಮವಹಿಸಿ ಪ್ರವಾಸಿಗರಿಗೆ ಕಡಲ ತೀರಕ್ಕೆ ತೆರಳಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ. ಕಡಲ ತೀರಕ್ಕೆ ತೆರಳಲು ಅನುವು ಮಾಡುತ್ತಿದ್ದಂತೆ ಪ್ರವಾಸಿಗರ ದಂಡೇ ಸಮುದ್ರ ತೀರಕ್ಕೆ ಬಂತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇದಕ್ಕೂ ಪೂರ್ವದಲ್ಲಿ ಅಲ್ಲಿನ ಕೆಲ ಅಂಗಡಿಕಾರರು ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುರುಡೇಶ್ವರ (Murudeshwar) ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕಡಲ ತೀರಕ್ಕೆ ಪ್ರವಾಸಿಗರು ತೆರಳುವ ಮುನ್ನ ಇಡುಗಾಯಿ ಒಡೆದು ಪಟಾಕಿ ಸಿಡಿಸುವ ಮೂಲಕ ಕಡಲ ತೀರ ತೆರೆಯಲಾಯಿತು.
ಇದನ್ನೂ ಓದಿ : ಆಟೋ ರಿಕ್ಷಾ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ
ಸುರಕ್ಷತಾ ದೃಷ್ಟಿಯಿಂದ ಸ್ಪೀಡ್ ಬೋರ್ಡ್, ೧೨ ಜನ ಲೈಫ್ ಗಾರ್ಡ್, ಲೈಫ್ ಜಾಕೆಟ್, ಆಕ್ಸಿಜನ್ ಕಿಟ್ಸ್ ಹಾಗೂ ೨೫೦ ಮೀಟರ್ ವ್ಯಾಪ್ತಿಯಲ್ಲಿ ಸ್ವಿಮ್ಮಿಂಗ್ ಝೋನ್ ನಿರ್ಮಾಣ ಮಾಡಿ ಸುರಕ್ಷತಾ ಸಲಕರಣೆಗಳನ್ನು ನೀಡಲಾಗಿದೆ. ಭಟ್ಕಳ ಸಹಾಯಕ ಆಯುಕ್ತರು ಮುರುಡೇಶ್ವರ ಪೊಲೀಸರಿಗೆ ಕಡಲ ತೀರ (Murdeshwar beach) ತೆರೆಯಲು ಮೌಖಿಕ ಆದೇಶ ನೀಡಿದ ಬೆನ್ನಲ್ಲೇ ಪೊಲೀಸರು ಕಡಲ ತೀರಕ್ಕೆ ಪ್ರವಾಸಿಗರನ್ನು ಪ್ರವೇಶಿಸಲು ಬುಧವಾರ ಸಂಜೆಯಿಂದ ಅನುಮತಿ ನೀಡಿದ್ದಾರೆ.
ಇದನ್ನೂ ಓದಿ : ಗಣೇಶ ನಾಯ್ಕ ಹೃದಯಾಘಾತದಿಂದ ನಿಧನ