ಭಟ್ಕಳ: ಇಲ್ಲಿನ ಹಿಂದೂ ಸಮ್ಮೇಳನ ಸಮಿತಿಯಿಂದ ಮಾರ್ಚ್ ೮ರಂದು ರವಿವಾರ ನಗರದಲ್ಲಿ ಹಿಂದೂ ಸಂಗಮ (Hindu Sangam) ಆಯೋಜಿಸಲಾಗಿದೆ. ಮಧ್ಯಾಹ್ನ ೩.೩೦ರಿಂದ ಶೋಭಾಯಾತ್ರೆ ನಡೆಯಲಿದ್ದು, ಸಂಜೆ ೫ ಗಂಟೆಗೆ ಭಟ್ಕಳ (Bhatkal) ನಗರದ ಹಳೇ ಬಸ್ ನಿಲ್ದಾಣ ಬಳಿಯ ಆಟೋ ಚಾಲಕರ ಗಣೇಶೋತ್ಸವ ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಬಂಟ್ವಾಳ (Bantwal) ತಾಲೂಕಿನ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮದ ಯೋಗಿಕೌಸ್ತುಭ, ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಂಸದ, ಶಿರಸಿಯ (Sirsi) ಕದಂಬ ಸಮೂಹ ಸಂಸ್ಥೆಗಳ ಅಧ್ಯಕ್ಷ ಅನಂತಕುಮಾರ ಹೆಗಡೆ (Ananth Kumar Hegde) ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಹದಿನೈದು ನಿಮಿಷ ಮೊದಲು ಉಪಸ್ಥಿತರುವಂತೆ ಕೋರಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶೋಭಾಯಾತ್ರೆಯಲ್ಲಿ ಆಯಾ ಭಾಗದ ಭಜನಾ ತಂಡ, ಮಾತೆಯರು ಕುಂಭ ಕಳಸದೊಂದಿಗೆ, ಮಕ್ಕಳು ವೀರ ಪುರುಷರ ಹಾಗೂ ವೀರ ವನಿತೆಯರ ವೇಷಧಾರಿಯಾಗಿ ಪಾಲ್ಗೊಳ್ಳಬಹುದು. ಸ್ಥಳೀಯ ಡೋಲು, ಚಂಡೆ ಮತ್ತು ಸ್ತಬ್ಧಚಿತ್ರ ವಾಹನವನ್ನು ಜೋಡಿಸಬಹುದು ಎಂದು ಆಯೋಜಕರು ಕರೆ ನೀಡಿದ್ದಾರೆ.
Memorandum/ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ನೀಗಿಸಲು ಮನವಿ
ಶೋಭಾಯಾತ್ರೆಯು ಹಳೇ ಬಸ್ ನಿಲ್ದಾಣದ ಆಟೋ ಚಾಲಕರ ಗಣೇಶೋತ್ಸವ ಮೈದಾನದಿಂದ ಪ್ರಾರಂಭವಾಗಿ ಪಿ.ಎಲ್.ಡಿ ಬ್ಯಾಂಕ್ ಎದುರಿನ ಹೆದ್ದಾರಿಯ ಮಾರ್ಗವಾಗಿ ಭಟ್ಕಳದ ಮುಖ್ಯ ವೃತ್ತವನ್ನು ತಲುಪಿ ಪುನಃ ಅದೇ ಮಾರ್ಗವಾಗಿ ಆಟೋ ಚಾಲಕರ ಗಣೇಶೋತ್ಸವ ಮೈದಾನ ತಲುಪಲಿದೆ. ಪುರುಷರು ಬಿಳಿ ಅಂಗಿ, ಬಿಳಿ ಪಂಚೆ ಹಾಗೂ ಕೇಸರಿ ಶಲ್ಯ ಧರಿಸುವಂತೆ ವಿನಂತಿಸಲಾಗಿದೆ.
protest/ ಭಟ್ಕಳ ಪುರಸಭೆ ಎದುರು ಗುತ್ತಿಗೆದಾರ ಧರಣಿ
ಮಾರ್ಚ್ ೬ರಂದು ಬೈಕ್ ರ್ಯಾಲಿ: ದ್ವಿಚಕ್ರ ವಾಹನ ಹೊಂದಿರುವ ಹಿಂದೂ ಕಾರ್ಯಕರ್ತರು ಮಾ ೬ರಂದು ಶುಕ್ರವಾರ ಸಂಜೆ ೪ ಗಂಟೆಗೆ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಅವರಣದಿಂದ ಹೊರಟು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಹಿಂದೂ ಸಂಗಮ (Hindu Sangam) ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.



