ಭಟ್ಕಳ : ತಾಲೂಕಿನ ಸರ್ಪನಕಟ್ಟೆ ಪರಿಸರದಲ್ಲಿ ಅಗಂತುಕನೊಬ್ಬ ಬೆತ್ತಲೆಯಾಗಿ ಅಜ್ಞಾತ ಸ್ಥಳದಲ್ಲಿ ನಿಲ್ಲುತ್ತಿದ್ದು, ಈ ನಗ್ನ ವ್ಯಕ್ತಿ (naked man) ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹಲವು ದಿನಗಳಿಂದ ಅಪರಿಚಿತನೋರ್ವ ಹಡೀನ್ ಶಾಲೆಗೆ ಹೋಗುವ ರಸ್ತೆಯಲ್ಲಿ ಮರವೊಂದರ ಕೆಳಗೆ ನಿಲ್ಲುವುದನ್ನು ಸ್ಥಳೀಯರು ನೋಡಿದ್ದಾರೆ. ಮಹಿಳೆಯರು ಕಂಡಾಗ ಬೆತ್ತಲಾಗುವ ಈತ, ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ : ತಪ್ಪಿದ ರೈಲು ದುರಂತ, ಪ್ರಯಾಣಿಕರ ನಿಟ್ಟುಸಿರು
೧೫ ದಿನಗಳ ಹಿಂದೆ ಓರ್ವ ಬಾಲಕಿ ಸಂಜೆ ಶಾಲೆಯಿಂದ ಮನೆಗೆ ಬರುವಾಗ ಈ ವ್ಯಕ್ತಿ ಹಿಂಬಾಲಿಸಿದ್ದಾನೆ. ಹೆದರಿದ ಬಾಲಕಿ ಓಡಿ ಬರುವಾಗ ಎಡವಿ ಬಿದ್ದು ಗಾಯ ಮಾಡಿಕೊಂಡಿದ್ದಳು. ನಿನ್ಮೆ ಮಂಗಳವಾರ ಸಂಜೆ ಕೂಡ ಮಹಿಳೆಯೋರ್ವಳು ನಡೆದುಕೊಂಡು ಹೋಗುತ್ತಿರುವಾಗ ಬೆತ್ತಲೆಯಾಗಿ ನಿಂತಿರುವುದನ್ನು ನೋಡಿ ಹೆದರಿದ್ದಾಳೆ.
ಇದನ್ನೂ ಓದಿ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಹೊಸಬರಿಗೆ ಸ್ವಾಗತ
ಈ ಪರಿಸರದಲ್ಲಿ ಪ್ರಾಥಮಿಕ ಶಾಲೆ, ಐಟಿಐ ಕಾಲೇಜು, ಪದವಿ ಕಾಲೇಜು ಇದ್ದು ವಿದ್ಯಾರ್ಥಿನಿಯರು ತಿರುಗಾಡಲು ಭಯ ಪಡುವಂತಾಗಿದೆ. ಶಾಲೆ-ಕಾಲೇಜು ಬಿಡುವ ಸಮಯದಲ್ಲಿ ಸಾಯಂಕಾಲ ಅಕೇಶಿಯಾ ಮರದಡಿ ನಿಲ್ಲುವ ನಗ್ನ ವ್ಯಕ್ತಿ(naked man), ಹೆಣ್ಣುಮಗು ಅಥವಾ ಮಹಿಳೆ ಏಕಾಂಗಿಯಾಗಿ ಬಂದರೆ ಹಿಂಬಾಲಿಸುತ್ತಿರುವುದಾಗಿ ಸ್ಥಳೀಯರು ‘ಭಟ್ಕಳ ಡೈರಿ’ಗೆ ತಿಳಿಸಿದ್ದಾರೆ. ಪೊಲೀಸರು ಈ ಪ್ರದೇಶದಲ್ಲಿ ಬೀಟ್ ಮಾಡುವ ಮೂಲಕ ಈತನನ್ನು ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.