ಭಟ್ಕಳ (Bhatkal) : ನಾಮಧಾರಿ (Namadhari) ಸಮಾಜದ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಹಾಗೂ ಪಾಲಕಿ ಮಹೋತ್ಸವ ಕಾರ್ಯಕ್ರಮವು ಫೆಬ್ರವರಿ ೨ ರಿಂದ ೫ರ ತನಕ ನಡೆಯಲಿದೆ ಎಂದು ನಾಮಧಾರಿ (Namadhari) ಸಮಾಜದ ಅಧ್ಯಕ್ಷ ಅರುಣ ನಾಯ್ಕ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಸೋಮವಾರದಂದು ಇಲ್ಲಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಹೋತ್ಸವ ಕುರಿತು ಮಾಹಿತಿ ನೀಡಿದರು. ಫೆಬ್ರವರಿ ೨ ರವಿವಾರದಂದು ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ ೮ನೇ ಪುನರ್ ಪ್ರತಿಷ್ಠಾಂಗದ ವರ್ಧಂತಿ ಮಹೋತ್ಸವ ನಡೆಯಲಿದೆ. ಈ ಸಂದರ್ಭ ಸಕಲ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ತಿಳಿಸಿದರು.

ಇದನ್ನೂ ಓದಿ : weather forecast / ಕರಾವಳಿ ಸಹಿತ ಹಲವೆಡೆ ಮಳೆ

ಫೆಬ್ರವರಿ ೩ ಸೋಮವಾರದಂದು ಸಂಜೆ ೭ ಗಂಟೆಗೆ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿಯ ಆಗಮನ ಆಗಲಿದೆ‌. ಫೆಬ್ರವರಿ ೪ ರಂದು ಮುಂಜಾನೆ ಗಣಪತಿ ಪೂಜೆ, ವಿಶ್ವಕ್ಸೇನಾರಾಧನೆ, ಪುಣ್ಯಹವಾಚನ, ಮಹಾ ಸಂಕಲ್ಪ, ಕಳಶಾರಾಧನೆ, ಗಣಹೋಮ ಹಾಗೂ ದೇವರಿಗೆ ತುಲಾಭಾರ ಸಮರ್ಪಣೆ ನಡೆಯಲಿದೆ. ಅಂದು ಬೆಳಿಗ್ಗೆ ೧೦.೩೦ಕ್ಕೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanand Swamiji) ಅವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಪೂಜ್ಯ ಗುರುಗಳಿಂದ ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾ ಮಂಗಳಾರತಿ, ೧ ಗಂಟೆಯಿಂದ ೩ ಗಂಟೆ ತನಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೩.೩೦ರಿಂದ ಶ್ರೀ ದೇವರ ಪಾಲಕಿ ಮೆರವಣಿಗೆ ನಡೆಯಲಿದೆ. ರಾತ್ರಿ ೧೧ ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ವಿವರಿಸಿದರು.

ಇದನ್ನೂ ಓದಿ : Blood Donation/ ಭಟ್ಕಳದಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

ಫೆಬ್ರವರಿ ೫ ರಂದು ಬೆಳಿಗ್ಗೆ ೮.೩೦ ಗಂಟೆಗೆ ಶ್ರೀ ದೇವರಿಗೆ ಓಕಳಿ ಸೇವೆ (ಅವಭ್ರತ ಸ್ನಾನ), ೧೧ ಗಂಟೆಗೆ ಫಲಾವಳಿ ವಸ್ತುಗಳ ವಿಲೇವಾರಿ, ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ ೯.೩೦ಕ್ಕೆ ಉಪ್ಲಾಡಿಯ ತ್ರಿನೇತ್ರ ಕಲಾತಂಡದಿಂದ ಸಾಮಾಜಿಕ ನಾಟಕ “ಪಂಚ ದೀವಟಿಗೆ’ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೃಷ್ಣ ನಾಯ್ಕ ಆಸರಕೇರಿ, ಪ್ರಕಾಶ ನಾಯ್ಕ, ಶಂಕರ ನಾಯ್ಕ, ಎಮ್.ಕೆ.ನಾಯ್ಕ, ಮಹಾಬಲೇಶ್ವರ ನಾಯ್ಕ, ಶ್ರೀಧರ ನಾಯ್ಕ, ವಿಠ್ಠಲ ನಾಯ್ಕ ಮುಂತಾದ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ : Mankal Vaidya/ ಉತ್ತರ ಕನ್ನಡ ಜಿಲ್ಲೆಗೆ ಭರಪೂರ ಯೋಜನೆಗಳು