ಕಾರವಾರ : ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಶಿರೂರಿನಲ್ಲಿ ಗುಡ್ಡ ಕುಸಿದು ಮರಣ ಹೊಂದಿರುವ ಕುಟುಂಬ ಸದಸ್ಯರ ಜೊತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ತೆರಳಿ(NHAI visit), ಮೃತರ ಕುಟುಂಬಗಳಿಗೆ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶಿರೂರು ಗುಡ್ಡ ಕುಸಿದು ಬೀಳಲು ಕಾರಣವಾದ NHAI,
IRB ಕಂಪನಿ ವಿರುದ್ಧ ಕಾನೂನು ಹೋರಾಟ ಅಂಗವಾಗಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ವಿ.ಪಿ. ಭ್ರಾಮನಕರ್ ಅವರನ್ನು ಭೇಟಿ ಮಾಡಿದರು(NHAI visit). ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ಪರಿಹಾರ ಹಣ ನೀಡಬೇಕು ಮತ್ತು ಕಂಪನಿಯಲ್ಲಿ ನೌಕರಿ ಒದಗಿಸುವುದಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ : ಭಟ್ಕಳದ ಮಾರಿ ಜಾತ್ರೆ ಸಂಪನ್ನ
ಈ ಸಂದರ್ಭದಲ್ಲಿ ರಾಷ್ಟ್ತ್ರೀಯ ಈಡಿಗ ಮಹಾ ಮಂಡಳಿ ರಾಜ್ಯ ಅಧ್ಯಕ್ಷ ಬಿ.ಎಚ್.ಮಂಚೆಗೌಡ, ಉಪಾಧ್ಯಕ್ಷ ನಾಗರಾಜ ನಾಯಕ ಸಾಗರ, ಶಿವಕುಮಾರ ದಾಸರಹಳ್ಳಿ, ಯುವ ಘಟಕದ ಅಧ್ಯಕ್ಷ ಸಚಿನ್ ನಾಯಕ ಹೊನ್ನಾವರ ಉಪಸ್ಥಿತರಿದ್ದರು.
ಇದನ್ನೂ ಓದಿ : ಭಟ್ಕಳ ತಾಪಂನಲ್ಲಿ ವಿ.ಡಿ.ಮೊಗೇರ ಬೀಳ್ಕೊಡುಗೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚೇರ್ಮನ್ ಸಂತೋಷ ಕುಮಾರ್ ಯಾದವ್, ಪ್ರಾದೇಶಿಕ ಅಧಿಕಾರಿ ಬ್ರಾಮನ್ಕರ್, ಯೋಜನಾ ನಿರ್ದೇಶಕ ಹೊನ್ನಾವರದ ಎನ್.ಹರಿಕೃಷ್ಣ, IRB ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಿ. ವೀರೇಂದ್ರ ಮಹಾಹಿಸ್ಕರ್ ಸೇರಿದಂತೆ ೮ ಜನರ ಮೇಲೆ ಈಗಾಗಲೇ ದೂರು ದಾಖಲಾಗಿದೆ. ನಾಳೆ (ಆ.೨) ಇದಕ್ಕೆ ಸಂಬಂಧಿಸಿದ ಕೇಸು ಅಂಕೋಲಾ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ಕೂಡ ನಡೆಯಲಿದೆ. ಕಂಪನಿಗಳಿಂದ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ ಅಂದ್ರೆ ದೇಶಾದ್ಯಂತ ರಾಷ್ಟೀಯ ಹೆದ್ದಾರಿ ತಡೆದು ಹೋರಾಟ ಮಾಡುವುದಕ್ಕೆ ರಾಷ್ಟ್ತ್ರೀಯ ಈಡಿಗ ಮಹಾ ಮಂಡಳಿ ನಿರ್ಣಯ ತೆಗೆದುಕೊಂಡಿದೆ.
– ನಾಗರಾಜ ನಾಯಕ, ರಾಜ್ಯ ಉಪಾಧ್ಯಕ್ಷ,
ಬೆಂಗಳೂರು