ಭಟ್ಕಳ (Bhatkal): ಡಿಸೆಂಬರ ೮ ರಂದು ಕಾರವಾರದಲ್ಲಿ (Karwar) ನಡೆಯುವ ಪಿಡಿಓ ಪರೀಕ್ಷೆ (PDO Exam) ಹಿನ್ನೆಲೆ ಅಭ್ಯರ್ಥಿಗಳ ಅನುಕೂಲಕ್ಕಾಗಿ ವಾ.ಕ.ರ.ಸಾ. ಸಂಸ್ಥೆಯ (NWKRTC) ವಿಶೇಷ ಬಸ್ ಸಂಚರಿಸಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದಲ್ಲಿ ಬೆಳಿಗ್ಗೆ ೫-೩೦ ಕ್ಕೆ ಈ ವಿಶೇಷ ಬಸ್ ಭಟ್ಕಳ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಹೊರಟು ೮-೪೫ ಕ್ಕೆ ಕಾರವಾರಕ್ಕೆ ತಲುಪಲಿದೆ. ಹಾಗೆಯೇ ಹೊನ್ನಾವರ (Honnavar) ಮತ್ತು ಕುಮಟಾದಲ್ಲೂ (Kumta) ಪಿ.ಡಿ.ಓ ಪರೀಕ್ಷಾ (PDO Exam) ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು (Mankal Vaidya) ಈ ವ್ಯವಸ್ಥೆ ಮಾಡಿಸಿದ್ದು, ಇದರ ಸದುಪಯೋಗವನ್ನು ಪಿಡಿಓ ಪರೀಕ್ಷಾ ಅಭ್ಯರ್ಥಿಗಳು ಪಡೆಯಬೇಕೆಂದು ಎಂದು ಸಚಿವರ ಭಟ್ಕಳ ಕಾರ್ಯಾಲಯ  ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : bubble baby/ ಉ.ಕ. ಜಿಲ್ಲೆಯ ಮಗುವಿಗೆ ಅಸ್ಥಿಮಜ್ಜೆ ಕಸಿ