ಭಟ್ಕಳ : WHR RK ಫೌಂಡೇಶನ್ ವಿಶ್ವ ಮಾನವ ಹಕ್ಕು ಸಂಸ್ಥೆಯ ಭಟ್ಕಳ ತಾಲೂಕು ಘಟಕದ ಪದಾಧಿಕಾರಿಗಳ ನ್ನು ಆಯ್ಕೆ ಮಾಡಲಾಗಿದೆ. ಅಂಕೋಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ (office bearers) ಕಾರ್ಡ್ ವಿತರಣೆ ಮಾಡಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳದ ಅಧ್ಯಕ್ಷರಾಗಿ ಶ್ರೀಧರ್ ನಾಯ್ಕ,
ಉಪಾಧ್ಯಕ್ಷರಾಗಿ ಶ್ರೀನಿವಾಸ್ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ನಾಯ್ಕ, ಸಹ ಕಾರ್ಯದರ್ಶಿಯಾಗಿ ವೆಂಕಟೇಶ್ ನಾಯ್ಕ ನೇಮಕಗೊಂಡಿದ್ದಾರೆ. ಪದಾಧಿಕಾರಿಗಳ (office bearers) ಜೊತೆ ಸದಸ್ಯರಾಗಿ ಪಾಂಡು ನಾಯ್ಕ, ದಿನೇಶ್ ನಾಯ್ಕ, ಅಣ್ಣಪ್ಪ ನಾಯ್ಕ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಭುವನಜ್ಯೋತಿ ಕಾನೂನು ಕಾಲೇಜು ಉದ್ಘಾಟನೆ
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಿಲ್ಲಾಧ್ಯಕ್ಷೆ ಅರ್ಚನಾ ಜೆ ನಾಯಕ, ಶಿರಸಿ – ಸಿದ್ದಾಪುರ ಅಧ್ಯಕ್ಷ ಮಂಜುನಾಥ ನಾಯ್ಕ, ಜಿಲ್ಲಾ ಪಬ್ಲಿಕ್ ಅಧಿಕಾರಿ ಜಯಪ್ರಕಾಶ ನಾಯಕ, ಕರ್ನಾಟಕ ರಾಜ್ಯ ಉಪಾಧ್ಯಕ್ಷ ಬಸವರಾಜ. ಹಳಿಯಾಳ ಅಧ್ಯಕ್ಷೆ ಪೂಜಾ ಧೂಳಿ, ಅಂಕೋಲಾ ಅಧ್ಯಕ್ಷ ಹೂವ ಗೋವಿಂದ ಖಂಡೇಕರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಾಲಿನಿ ನಿರ್ವಹಿಸಿದರು. ಸುರೇಖಾ ಗುನಗಾ ವಂದಿಸಿದರು.