ಭಟ್ಕಳ (Bhatkal) : ಬ್ಯಾಟರಿ ಮಾರಾಟ ನೆಪದಲ್ಲಿ ಲಿಂಕ್‌ ಕಳುಹಿಸಿ ೧ ಲಕ್ಷ ರೂ. ವಂಚನೆ ಮಾಡಿರುವ (online fraud) ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಮಾರುಕೇರಿಯ ಕೋಟಖಂಡ ನಿವಾಸಿ ಗೋವಿಂದ ವಾಸುದೇವ ಹೆಗಡೆ (೪೯) ವಂಚನೆಗೆ (online fraud) ಒಳಗಾದವರು. ಇವರಿಗೆ ನ.೨೭ರಂದು ರಾತ್ರಿ ೮.೩೦ರ ಸುಮಾರಿಗೆ ಮೊಬೈಲ್ ನಂಬರ ೭೪೩೯೪೬೧೬೨೮ ನಿಂದ ವಾಟ್ಸಾಪ್‌ ವಿಡಿಯೋ ಕರೆಯೊಂದು ಬಂದಿತ್ತು. ವಿಡಿಯೋದಲ್ಲಿ ಕಾಣಿಸಿಕೊಂಡ ಅಪರಿಚಿತರು ತಾವು ಬ್ಯಾಟರಿ ಕಂಪನಿ ಕಡೆಯವರು ಎಂದು ಪರಿಚಯಿಸಿಕೊಂಡಿದ್ದಾರೆ. ಗೋವಿಂದ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ಆರೋಪಿತರು ಬ್ಯಾಟರಿ ಆರ್ಡರ್‌ ಮಾಡುವುದಿದ್ದಲ್ಲಿ ಲಿಂಕ್‌ ಬಳಕೆ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಲಿಂಕ್‌ ಬಳಕೆ ಮಾಡಿದಾಗ, ೨ ರೂ. ಹಣ ಕಳುಹಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಹೋರಾತ್ರಿ ಭಜನೆ

ಆಗ ಅನುಮಾನಗೊಂಡ ಗೋವಿಂದ ಹೆಗಡೆ ಮೊಬೈಲ್‌ ಸ್ವಿಚ್ ಆಫ್‌ ಮಾಡಿದ್ದಾರೆ. ಮಧ್ಯರಾತ್ರಿ ೧.೩೦ರ ಸುಮಾರಿಗೆ ಗೋವಿಂದ ಹೆಗಡೆಯವರ ಮೊಬೈಲ್‌ನಲ್ಲಿ ಬಂದಿರುವ ಮೆಸೇಜ್‌ ಗಮನಿಸಿದಾಗ ಶಾಕ್‌ ಕಾದಿತ್ತು.  ಕರ್ನಾಟಕ ಬ್ಯಾಂಕಿನ ಭಟ್ಕಳ ಶಾಖೆಯಲ್ಲಿರುವ ಅವರ ಉಳಿತಾಯ
ಖಾತೆಯಿಂದ ೧ ಲಕ್ಷ ರೂ. ಹಣವನ್ನು ಫೋನ್‌ಪೇ ಮೂಲಕ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಗೋವಿಂದ ಹೆಗಡೆ ದೂರು (Complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : Partagali/ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ