ಭಟ್ಕಳ (Bhatkal) : ಇಲ್ಲಿನ ಅಂಜುಮನ್ (Anjuman) ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ (AITM) ನಲ್ಲಿರುವ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು (CSE) AICTE-ATAL ಪ್ರಾಯೋಜಿತ ಆರು ದಿನಗಳ ಆನ್‌ಲೈನ್ (online program) ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (FDP) ಡಿ.೨ರಿಂದ೭ರವರೆಗೆ ಹಮ್ಮಿಕೊಂಡಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
“ಜನರೇಟಿವ್ AI ಅನಾವರಣ: ಪರಿಕಲ್ಪನೆಗಳು, ಮಾದರಿಗಳು ಮತ್ತು ನೈಜ-ಪ್ರಪಂಚದ ಅಪ್ಲಿಕೇಶನ್‌ಗಳು” ಈ ವಿಷಯ ಕುರಿತು ೨೯೮ ಉತ್ಸಾಹಿ ಬೋಧನಾ ವಿಭಾಗದ ಸದಸ್ಯರು ಮತ್ತು ಜನರೇಟಿವ್ ಎಐ ಪ್ರಪಂಚವನ್ನು ಅಧ್ಯಯನ ಮಾಡಲು ಉತ್ಸುಕರಾಗಿರುವ ಸಂಶೋಧಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಸಿಎಸ್‌ಇ ವಿಭಾಗದ ಅಧ್ಯಾಪಕರಾದ ರೆನಿಶಾ ಪಿ.ಎಸ್. ಮತ್ತು ಡಾ.ಡೇನಿಯಲ್ ಸೆಲ್ವರಾಜ್ ಕಾರ್ಯಕ್ರಮ ಸಂಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶೈಕ್ಷಣಿಕ ಮತ್ತು ಉದ್ಯಮದ ಹೆಸರಾಂತ ತಜ್ಞರು ಜನರೇಟಿವ್ AI ನ ವಿವಿಧ ಅಂಶಗಳ ಕುರಿತು ಒಳನೋಟವುಳ್ಳ ವಿವರಣೆ ನೀಡಿದರು. ಕಾರ್ಯಕ್ರಮದ (online program) ಯಶಸ್ಸಿಗೆ AITM ಪ್ರಾಂಶುಪಾಲ ಡಾ. ಕೆ ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಜೆ. ಅನ್ವರ್ ಶಾತಿಕ್ ಹಾಗೂ ಇತರ ಅಧ್ಯಾಪಕರು ಅಭಿನಂದಿಸಿದ್ದಾರೆ.
ಇದನ್ನೂ ಓದಿ : Beach Tragedy/ ಮುರ್ಡೇಶ್ವರದಲ್ಲಿ ಮೊಕ್ಕಾಂ ಹೂಡಿದ ಡಿಸಿ, ಎಸ್ಪಿ