ಭಟ್ಕಳ (Bhatkal): ಇಲ್ಲಿನ ಸಂಶುದ್ದೀನ್ ವೃತ್ತದ ಪಕ್ಕದಲ್ಲಿರುವ ಭಾರತ್ ಪೆಟ್ರೋಲಿಯಂ (Bharat Petroleum) ಪಂಪ್ನ ಎದುರುಗಡೆ ನಿಲ್ಲಿಸಿರುವ ಟೂರಿಸ್ಟ್ ಕಾರುಗಳನ್ನು (taxi stand) ತೆರವು ಗೊಳಿಸುವಂತೆ ಟ್ಯಾಕ್ಸಿ ಚಾಲಕ-ಮಾಲಕರ ಸಂಘದ ವತಿಯಿಂದ ನಗರ ಠಾಣೆಯ ಪಿ.ಐ. ಗೋಪಿಕೃಷ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದಲ್ಲಿ ಸುಮಾರು ೨೫೦-೨೬೦ ಟೂರಿಸ್ಟ್ ಕಾರುಗಳಿವೆ. ನಮ್ಮದೇ ಆದ ಟ್ಯಾಕ್ಸಿ ಸ್ಟ್ಯಾಂಡನ್ನು ಮಾಡಿಕೊಂಡಿದ್ದೇವೆ. ನಮ್ಮದೇ ಆದ ಸಂಘವನ್ನು ರಚಿಸಿಕೊಂಡಿದ್ದೇವೆ. ಭಟ್ಕಳ ಬಸ್ ಸ್ಟ್ಯಾಂಡ್ ಎದುರುಗಡೆ ಸುಮಾರು ೩೦ ವರ್ಷಗಳಿಂದ ಪಾರ್ಕಿಂಗ್ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಕುಸಿದು ಬಿದ್ದು ಕೃಷಿಕ ಸಾವು
ಯೂನಿಯನ್ ಸ್ಟ್ಯಾಂಡ್ ನಲ್ಲಿ ಪಾರ್ಕಿಂಗ್ ಮಾಡಿ ಬಾಡಿಗೆ ಮಾಡಲು ಕೆಲವೊಂದು ನಿಯಮ ನಿಬಂಧನೆಗಳಿವೆ. ಅಂದರೆ ಯೂನಿಯನ್ ಯೂನಿಯನ್ ಫೀ ಮತ್ತು ಡ್ರೈವರ್ ಮೆಂಬರ್ ಫೀಸ್ ಬ್ಯಾಂಕಿನಲ್ಲಿ ತುಂಬಿದ ನಂತರವೇ ಯೂನಿಯನ್ನಲ್ಲಿ ಬಂದು ಬಾಡಿಗೆ ಮಾಡಲು ಅವಕಾಶವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಯುವಕ ನಾಪತ್ತೆ ಪ್ರಕರಣ ದಾಖಲು
ಆದರೆ ಕೆಲವೊಂದು ಟೂರಿಸ್ಟ್ ಕಾರಿನವರು ಭಟ್ಕಳದ ಭಾರತ್ ಪೆಟ್ರೋಲ್ ಪಂಪಿನ ಎದುರುಗಡೆ ಪಾರ್ಕಿಂಗ್ ಮಾಡಿ ಬಾಡಿಗೆ ಮಾಡುತ್ತಿರುವುದು ಕಂಡು ಬಂದಿದೆ. ನಮ್ಮದೇ ಆದ ಸಂಘ ಮತ್ತು ಯೂನಿಯನ್ ಇರುವಾಗ ಬೇರೆ ಕಡೆ ಪಾರ್ಕಿಂಗ್ ಮಾಡಿ ಬಾಡಿಗೆ ಮಾಡುವುದರಿಂದ ಸದಸ್ಯರಿಗೆ ತೊಂದರೆ ಆಗುತ್ತಿದೆ. ನಾವು ಅವರ ಹತ್ತಿರ ಹೋಗಿ ವಿಷಯವನ್ನು ಚರ್ಚಿಸಿ ನಮ್ಮೊಂದಿಗೆ ಬನ್ನಿ ಅಂತ ಕೇಳಿದಾಗ ಅವರು ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಅಕ್ಟೋಬರ್ ೨೩ರಂದು ವಿವಿಧೆಡೆ ಅಡಿಕೆ ಧಾರಣೆ
ಬೇರೆ ಕಡೆ ನಿಲುಗಡೆ ಮಾಡುವುದು ಸಂಘದ ನಿಯಮ ನಿಬಂಧನೆಗಳಿಗೆ ವಿರುದ್ಧವಾಗಿರುವುದರಿಂದ ಭಾರತ್ ಪೆಟ್ರೋಲ್ ಪಂಪ್ನ ಎದುರುಗಡೆ ಪಾರ್ಕಿಂಗ್ ಮಾಡುವ ಎಲ್ಲಾ ಟೂರಿಸ್ಟ್ ಕಾರುಗಳನ್ನು ತೆರವುಗೊಳಿಸಬೇಕು. ನೋಂದಣಿಯಾಗಿರುವ ನಮ್ಮ ಸಂಘದಲ್ಲಿ ಸೇರಿಕೊಂಡು ನಮ್ಮ ಹಾಗೆ ಅವರು ಸಹ ಬಾಡಿಗೆ ಮಾಡಲಿ. ಆದ್ದರಿಂದ ಇವತ್ತಿನಿಂದಲೇ ಅಲ್ಲಿ ಪಾರ್ಕಿಂಗ್ ಮಾಡಿರುವ ಎಲ್ಲಾ ಗಾಡಿಗಳನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವಿಡಿಯೋ ವರದಿ ಸಹಿತ ಇದನ್ನೂ ಓದಿ : ಮೇವಿಗಾಗಿ ಬಂದ ಗೋವಿನ ವಧೆ