ಭಟ್ಕಳ (Bhatkal) : ಮಹಾಶಿವರಾತ್ರಿ (Maha Shivaratri) ಪ್ರಯುಕ್ತ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಿಂದ ಸಾವಿರಕ್ಕೂ ಅಧಿಕ ಶಿವ ಭಕ್ತರು ವಿಶ್ವ ಪ್ರಸಿದ್ಧ ಮುರ್ಡೇಶ್ವರದ (Murudeshwar) ಶಿವ ದೇಗುಲಕ್ಕೆ ಬರಿಗಾಲಿನಲ್ಲಿ ಸುಮಾರು ೧೭ ಕಿಲೋ ಮೀಟರ್ ಕ್ರಮಿಸಿ (Padayatra), ದೇವರ ದರ್ಶನ ಪಡೆದು ಪುನೀತರಾದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರಂಜನ್ ಇಂಡಿಯನ್ ಏಜೆನ್ಸಿ ವತಿಯಿಂದ ೧೫ ವರ್ಷಗಳಿಂದ ಪ್ರತಿ ವರ್ಷವೂ ಶಿವರಾತ್ರಿಯಂದು ಭಟ್ಕಳದಿಂದ ಮುರುಡೇಶ್ವರಕ್ಕೆ (Murudeshwar) ಪಾದಯಾತ್ರೆ (Padayatra) ಆಯೋಜಿಸಲಾಗುತ್ತದೆ. ಭಟ್ಕಳ ಪಟ್ಟಣದ ಚೋಳೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಪಾದಯಾತ್ರೆ ಕೈಗೊಂಡ ಭಕ್ತರು, ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ, ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ ಮುರ್ಡೇಶ್ವರ ದೇವಸ್ಥಾನಕ್ಕೆ ತಲುಪಿದರು. ಅಲ್ಲಿ ಸಮುದ್ರ ಸ್ನಾನ ಕೈಗೊಂಡು, ಅತ್ಯಂತ ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದರು.

ವಿಡಿಯೋ ಸಹಿತ ಇದನ್ನೂ ಓದಿ : Shivaratri/ ಲಕ್ಷಾಂತರ ಭಕ್ತರಿಂದ ಮುರುಡೇಶ್ವರನ ದರ್ಶನ

ಕಳೆದ ೧೫ ವರ್ಷದಿಂದ ಈ ಪಾದಯಾತ್ರೆ ನಡೆಯುತ್ತಿದ್ದು, ಪ್ರತಿ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಸುಕಿನ ಜಾವ ೪ ಗಂಟೆಗೆ ಪಾದಯಾತ್ರೆ ಆರಂಭ ನಿಗದಿಯಾಗಿದ್ದರೂ, ಮಧ್ಯರಾತ್ರಿ ೧೨ ಗಂಟೆಯಿಂದಲೇ ಭಕ್ತರು ಪಾದಯಾತ್ರೆ ಕೈಗೊಂಡಿದ್ದು ಕಂಡುಬಂತು.  ದಾರಿಯುದ್ದಕ್ಕೂ ಶಿವ ನಾಮಸ್ಮರಣೆ, ಶಿವ ಸ್ತುತಿಯೊಂದಿಗೆ ಜಯಘೋಷ, ರಾಮ ಭಜನೆ ಹಾಡಿದರು. ಬಹುತೇಕ ಪುರುಷರು ಪಂಚೆ, ಶಾಲು ಹಾಗೂ ಮಹಿಳೆಯರು ಬೂದು ಬಣ್ಣದ ಸೀರೆಯನ್ನು ಧರಿಸಿ ಯಾತ್ರೆಯಲ್ಲಿ ಸಾಗಿಬಂದಿದ್ದು ವಿಶೇಷವಾಗಿತ್ತು. ಪುಟಾಣಿ ಮಕ್ಕಳು ಕೂಡ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.

ಇದನ್ನೂ ಓದಿ : Heatware Alert/ ಕರಾವಳಿಯಲ್ಲಿ ಬಿಸಿಗಾಳಿ ಎಚ್ಚರಿಕೆ