ಭಟ್ಕಳ (Bhatkal): ಅಜ್ಜಿಯ ಹಾಸಿಗೆ ಅಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಮುತ್ತೂಟ್ ಫೈನಾನ್ಸ್ ನಲ್ಲಿ (muthoot finance) ಮೊಮ್ಮಗ ಒತ್ತೆ ಇಟ್ಟ ಒಟ್ಟು ೫ ಲಕ್ಷ ರೂ ಮೌಲ್ಯದ ೮೬.೬೦೦ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ (Jewellery Seized).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರಕರಣಕ್ಕೆ ಸಂಬಂಧಿಸಿದಂತೆ ೪.೫೦ ಲಕ್ಷ ರೂಪಾಯಿ ಮೌಲ್ಯದ ಒಟ್ಟೂ ೯೦ ಗ್ರಾಂ ಬಂಗಾರದ ಆಭರಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ದೂರನ್ನು ನೀಡಲಾಗಿತ್ತು. ನಂತರ ತನಿಖೆಯಲ್ಲಿ ದೂರುದಾರ ಮೊಮ್ಮಗನೇ ಆರೋಪಿಯಾಗಿರುವುದು ತಿಳಿದು ಬಂದಿತ್ತು. ಆತನನ್ನು ವಿಚಾರಣೆ ನಡೆಸಿದಾಗ. ಕಳುವು ಮಾಡಿದ ೬ ಬಂಗಾರದ ಬಳೆಗಳು, ೨ ಸಣ್ಣ ಬಂಗಾರದ ಬಳೆಗಳು (ಕಡಾಯಿ), ೧ ಬಂಗಾರದ ಚೈನ್ ಹೀಗೆ ಒಟ್ಟು ೮೬.೬೦೦ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಭಟ್ಕಳದ ಮುತ್ತೂಟ್ ಫೈನಾನ್ಸ್ ನಲ್ಲಿ ಇಟ್ಟ ಬಗ್ಗೆ ಒಪ್ಪಿಕೊಂಡಿದ್ದ. ನಂತರ ಆರೋಪಿತನಿಗೆ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿತ್ತು. ಆರೋಪಿ ಸದ್ಯ ನ್ಯಾಯ್ಯಾಂಗ ಬಂಧನದಲ್ಲಿ (Judicial custody) ಇದ್ದಾನೆ. ಒತ್ತೆ ಇಟ್ಟಿರುವ ಕಳುವಾದ ಆಭರಣಗಳನ್ನು ಮುತ್ತೂಟ್ ಫೈನಾನ್ಸದವರು ಹಾಜರ ಪಡಿಸಿದ್ದು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ (Jewellery Seized).
ಇದನ್ನೂ ಓದಿ : Ramadan Market/ ಭಟ್ಕಳದಲ್ಲಿ ರಂಜಾನ್ ಮಾರುಕಟ್ಟೆ ವೀಕ್ಷಣೆ