ಭಟ್ಕಳ (Bhatkal) : ಉತ್ತರ ಕನ್ನಡ (Uttara Kannada) ಜಿಲ್ಲೆಯ ಹಿರಿಯ ನಾಟಕ ಮಂಡಳಿಗಳಲ್ಲಿ ಒಂದಾದ ಪಟ್ಟಣದ ಸೋನಾರಕೇರಿಯ ಶ್ರೀ ವಿರೂಪಾಕ್ಷ ಕಲಾ ಮಿತ್ರ ಮಂಡಳಿಯ ೭೦ನೇ ವರ್ಷದ ಕಲಾಕಾಣಿಕೆಯಾಗಿ ‘ಆಹುತಿ’ ಎಂಬ ಸಾಮಾಜಿಕ ನಾಟಕ (Drama) ಫೆಬ್ರವರಿ ೨೭ರಂದು ಪ್ರದರ್ಶನಗೊಳ್ಳಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂದು ರಾತ್ರಿ ೭ ಗಂಟೆಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತದನಂತರ ನಾಟಕ (Drama) ಪ್ರದರ್ಶನಗೊಳ್ಳಲಿದೆ. ಕಲಾವಿದರಾದ ರಾಮನಾಥ ಮಹಾಲೆ, ರಘುರಾಮ ಮಡಿವಾಳ, ರಾಮದಾಸ ದೇವಾಡಿಗ, ವಿಶ್ವನಾಥ ಮಹಾಲೆ, ವಿವೇಕ ಮಹಾಲೆ, ಹರಿದಾಸ ಮಡಿವಾಳ, ಕೃಷ್ಣಾನಂದ ಶೇಟ ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಸೋನಾರಕೇರಿಯ ಸಂತ ಅಂತೋನಿ ಸೌಂಡ್ ಸಿಸ್ಟಮ್ ರಂಗ ಸಜ್ಜಿಕೆಯಲ್ಲಿ, ಕುಮಟಾದ ವಿಜಯ ಮಹಾಲೆ ಸಂಗೀತ ಪ್ರಸ್ತುತಪಡಿಸುವರು. ಕುಮಟಾ (Kumta) ತಾಲೂಕಿನ ಮಿರ್ಜಾನಿನ ಶ್ರೀ ಗುರು ರಾಘವೇಂದ್ರ ವಸ್ತ್ರ & ವರ್ಣಾಲಂಕಾರ ತಂಡದವರು ವೇಷಭೂಷಣ ಮಾಡುವರು.
ಇದನ್ನೂ ಓದಿ : Police Raid/ ಇಸ್ಪೀಟ್ ಅಡ್ಡೆಗೆ ಭಟ್ಕಳ ಪೊಲೀಸರ ದಾಳಿ
೧೯೫೬ರಲ್ಲಿ ಸ್ಥಾಪನೆಗೊಂಡ ಶ್ರೀ ವಿರೂಪಾಕ್ಷ ಕಲಾ ಮಿತ್ರ ಮಂಡಳಿಯು ಶಿವರಾತ್ರಿ ಅಂಗವಾಗಿ ಸೋನಾರಕೇರಿಯಲ್ಲಿರುವ ಶ್ರೀ ವಿರೂಪಾಕ್ಷ ದೇವರಿಗೆ ಕಳೆದ ೬೯ ವರ್ಷಗಳಿಂದ ಚಾಚೂ ತಪ್ಪದೆ ನಾಟಕ ಪ್ರದರ್ಶನದ ಮೂಲಕ ಕಲಾಕಾಣಿಕೆ ಸಮರ್ಪಿಸುತ್ತಿದೆ. ಇದಲ್ಲದೆ ಗೋಕರ್ಣ(Gokarna), ಮುರುಡೇಶ್ವರ (Murudeshwar), ಧರ್ಮಸ್ಥಳ (Dharmastala) ಸೇರಿದಂತೆ ವಿವಿಧೆಡೆ ನಾಟಕ ಪ್ರದರ್ಶನ ಮಾಡಿ ಕಲರಸಿಕರ ಮೆಚ್ಚುಗೆ ಗಳಿಸಿದೆ. ನಾಟಕ ಪ್ರದರ್ಶನ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ : Murdeshwar/ ಕಾರು ಡಿಕ್ಕಿಯಾಗಿ ಮೋಟರ್ ಸೈಕಲ್ ಸವಾರಗೆ ಗಾಯ