ಭಟ್ಕಳ (Bhatkal) : ಶಿಕ್ಷಕ, ಸಾಹಿತಿ ಮತ್ತು ಕವಿಯೂ ಆಗಿರುವ ಶಿರಾಲಿಯ ಶ್ರೀಧರ ಶೇಟ್  ರಚಿಸಿದ ಮಕ್ಕಳ ಕವಿತೆಯನ್ನು (Children poem) ಐಸಿಎಸ್ಇ (ICSE Syllabus) ಮತ್ತು ಸಿಬಿಎಸ್ಇ ಪಠ್ಯ ಪುಸ್ತಕದಲ್ಲಿ (CBSE syllabus) ಅಳವಡಿಸಿಕೊಳ್ಳಲಾಗಿದೆ. ಆಂಗ್ಲ ಮಾಧ್ಯಮದ ದ್ವಿತೀಯ ಮತ್ತು ತೃತೀಯ ಭಾಷೆ ಕನ್ನಡದ ಪಠ್ಯಪುಸ್ತಕದಲ್ಲಿ ಇವರ ಹೆಸರಾಂತ “ಬೇಲಿಯ ಹೂವು” ಕವಿತೆಯನ್ನು ಬಳಸಿಕೊಳ್ಳಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನವದೆಹಲಿಯ (New Delhi) ಮಾಡರ್ನ್ ಪಬ್ಲಿಷರ್ಸ್ (Modern Publishers) ರವರು ಈ ವರ್ಷ “ಕನ್ನಡ ಚಂದನ’ (Kannada Chandana) ಹೆಸರಿನಲ್ಲಿ ಕನ್ನಡ ಪಠ್ಯ ಪುಸ್ತಕ (Kannada Text Book) ಸರಣಿಯನ್ನು ಪ್ರಕಾಶನ ಮಾಡಿದ್ದಾರೆ. ಈ ಸರಣಿಯ (ICSE Syllabus) ಐದನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಈ ಕವಿತೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ. ಯಾವುದೇ ಗೊಬ್ಬರ, ನೀರು, ವಿಶೇಷ ಆರೈಕೆಯಿಲ್ಲದೆ ಬೆಳೆಯುವ ಬೇಲಿಯ ಹೂವು ತನ್ನ ಸ್ವ ಸಾಮರ್ಥ್ಯದಿಂದ ಅರಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅದೇ ರೀತಿ ನಮ್ಮ ಸಮಾಜದಲ್ಲಿ ಹಲವರು ಯಾರ ಕೃಪಾಶೀರ್ವಾದವಿಲ್ಲದೆ ಬೆಳೆದು ಸಾಧನೆ ಮಾಡುವ ಸಂದೇಶ ಈ ಕವಿತೆಯಲ್ಲಿ ಅಡಗಿದೆ.

ಇದನ್ನೂ ಓದಿ : ಆನ್‌ಲೈನ್‌ ಶಾಪಿಂಗ್‌ನಲ್ಲಿ ೬೩ ಸಾವಿರ ರೂ. ವಂಚನೆ

ಶ್ರೀಧರ ಶೇಟ್ ರವರು ಜಾಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮಟ್ಟದ ಹಲವು ಸಾಹಿತ್ಯಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಭಟ್ಕಳ ತಾಲೂಕು ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಕಳೆದ ವರ್ಷ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇವರ ಹಲವು ಕಥೆ, ಕವನ, ಲೇಖನ, ವ್ಯಂಗ್ಯಚಿತ್ರಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೨೦ ವರ್ಷಗಳ ಹಿಂದೆ ಪ್ರಕಟವಾಗುತ್ತಿದ್ದ “ಭಟ್ಕಳ ಡೈರಿ” ದಿನಪತ್ರಿಕೆಯಲ್ಲೂ ಇವರ ವ್ಯಂಗ್ಯಚಿತ್ರ ಪ್ರತಿನಿತ್ಯ ಪ್ರಕಟವಾಗುತ್ತಿತ್ತು. ಇವರು ಅಂಕಣಕಾರರೂ, ಚಿತ್ರ ಕಲಾವಿದರೂ ಮತ್ತು ಉತ್ತಮ ಕಾರ್ಯಕ್ರಮ ನಿರೂಪಕರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : Bhatkal/ ನೇಣು ಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆ