ಭಟ್ಕಳ (Bhatkal) : ಅಂದರ ಬಾಹರ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆಗೆ ಭಟ್ಕಳ ಪೊಲೀಸರು ದಾಳಿ ನಡೆಸಿದ (Police raid) ವೇಳೆ ನಾಲ್ವರು ಸಿಕ್ಕಿಬಿದ್ದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉಡುಪಿ (Udupi) ಜಿಲ್ಲೆಯ ಬೈಂದೂರು (Byndoor) ತಾಲೂಕಿನ ಶಿರೂರಿನ ಅಲಂದೂರು ಕುರುವಿಕೊಡ ಕನ್ನಡ ಶಾಲೆ ಹತ್ತಿರದ ನಿವಾಸಿ ಮೊಹಮ್ಮದ್ ಹನೀಫ್ ಬಾಬುಲಿ ಶೇಖ (೨೮), ಭಟ್ಕಳದ ಗುಳ್ಮಿ ಇಸ್ಮಾಯಿಲ್ ಪಳ್ಳಿ ಹತ್ತಿರದ ನಿವಾಸಿ ಮಹ್ಮದ್ ಜಾಫರ್ ಮಹ್ಮದ್ ಹುಸೇನ್ ನಮಾಜಿ (೪೬), ಭಟ್ಕಳದ ಮಣ್ಕುಳಿಯ ರಘುನಾಥ ರಸ್ತೆಯ ವಸಂತ ಮಂಜುನಾಥ ನಾಯ್ಕ ಮತ್ತು ಹಾನಗಲ್ (Hangal) ಮೂಲದ ಹಾಲಿ ಗುಳ್ಮಿ ನಿವಾಸಿ ಮೊಹಮ್ಮದ್ ಸಲೀಂ ಮೊಹಮ್ಮದ್ ಇಸ್ಮಾಯಿಲ್ ಖತೀಜ್ (೪೪) ಸಿಕ್ಕಿಬಿದ್ದ ಆರೋಪಿತರು.
ಇದನ್ನೂ ಓದಿ : Murdeshwar/ ಕಾರು ಡಿಕ್ಕಿಯಾಗಿ ಮೋಟರ್ ಸೈಕಲ್ ಸವಾರಗೆ ಗಾಯ
ಆರೋಪಿತರು ಭಟ್ಕಳ ಶಹರದ ಗುಳ್ಮಿಯ ಉಸ್ಮಾನ ನಗರ ೩ನೇ ಕ್ರಾಸ್‌ನಲ್ಲಿರುವ ರಿಯಾಜ್ ಮನೆಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದರು. ತಮ್ಮ ತಮ್ಮ ಲಾಭಗೋಸ್ಕರ ಇಸ್ಪೀಟ ಎಲೆಗಳ ಮೇಲೆ ಹಣ ಪಂಥ ಕಟ್ಟಿ ಅಂದರ ಬಾಹರ ಎಂಬ ಜೂಗಾರಾಟ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ (Police raid). ಖಚಿತ ಸುಳಿವಿನ ಮೇರೆಗೆ ನಡೆಸಿದ ದಾಳಿಯ ವೇಳೆ ೩೮೦೦ ರೂ. ನಗದು ಮತ್ತು ಜೂಗಾರಾಟದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : Gathering/ ನಿವೃತ್ತರಿಗೆ, ಸಾಧಕರಿಗೆ ಸನ್ಮಾನ; ಮಕ್ಕಳಿಂದ ನೃತ್ಯ ವೈಭವ