ಭಟ್ಕಳ: ಆಟೋವೊಂದರಲ್ಲಿ ಅಕ್ರಮವಾಗಿ ೧೬೮ ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ಮಾಡಿ (Bhatkal police raid) ಮಾಂಸ ಸಹಿತ ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಆಸರಕೇರಿ ಕೆರೆಗದ್ದೆ ಮಹಾಸತಿ ದೇವಸ್ಥಾನ ಸಮೀಪ ನಡೆದಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪರಾರಿಯಾದ ಆರೋಪಿಗಳನ್ನು ಎ. ಡಿ ಅಶ್ಪಾಕ್, ಶಾಹೀದ್, ಶಾಕೀರ ಮಹಮ್ಮದ್, ಎಂದು ಗುರುತಿಸಲಾಗಿದೆ. ಇವರು ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ದನಗಳನ್ನು ಕಳುವು ಮಾಡಿಕೊಂಡು ಬಂದಿದ್ದರೆನ್ನಲಾಗಿದೆ. ಗುರುವಾರ ರಾತ್ರಿ 11.30ಕ್ಕೆ ಅವುಗಳನ್ನು ಕಟಾವು ಮಾಡಿ ಮಾಂಸವನ್ನು ೫ ಸಿಮೆಂಟ್ ಚೀಲಗಳಲ್ಲಿ ತುಂಬಿಕೊಂಡು ಆಟೊ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದರು.
ಇದನ್ನೂ ಓದಿ : ಭಟ್ಕಳದ ಶಿಲ್ಪಿ ಸಹಿತ ಇಬ್ಬರಿಗೆ ಗಾಯ
ಭಟ್ಕಳ ನಗರ ಠಾಣೆಯ ಪಿ.ಎಸ್.ಐ ತಿಮ್ಮಪ್ಪ ಎಸ್ ನೇತೃತ್ವದ ತಂಡ ದಾಳಿ ಮಾಡಿದಾಗ (Bhatkal police raid) ಸುಮಾರು ೬೭೨೮೦ ರೂಪಾಯಿ ಮೌಲ್ಯದ ೧೬೮.೨೦೦ ಕೆ.ಜಿ. ಆಗುವಷ್ಟು ಮಾಂಸ ಆಟೋದಲ್ಲಿ ಪತ್ತೆಯಾಗಿದೆ. ಆರೋಪಿಗಳು ಆಟೋರಿಕ್ಷಾ ಹಾಗೂ ಅದರಲ್ಲಿಯ ಮಾಂಸ ವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಠಾಣೆಯ ಪಿ.ಎಸ್.ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ : ವಕ್ಫ್ ಆಸ್ತಿ ಮಾಡಲು ಬಂದ್ರೆ ಜನರೆಲ್ಲಾ ಸೇರಿ ಓಡಿಸಿ