ಶಿವಮೊಗ್ಗ (Shivamogga): ಪರಪ್ಪನ ಅಗ್ರಹಾರದಿಂದ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ (Central Jail) ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswami Murder Case) ಆರೋಪಿಗಳಿಬ್ಬರನ್ನು ಸ್ಥಳಾಂತರಿಸುತ್ತಿರುವ ಪೂರ್ವದಲ್ಲಿ  ಶಿವಮೊಗ್ಗ ಪೊಲೀಸರು ಇವತ್ತು ಬೆಳಗ್ಗಿನ ಜಾವ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ್ದಾರೆ (Raid on Jail). ಪೊಲೀಸ್‌ ಅಧೀಕ್ಷಕ  (Police superintedent) ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎಸ್‌ಪಿ ಮಿಥುನ್‌ ಕುಮಾರ್‌ ನೇತೃತ್ವದ ತಂಡದಲ್ಲಿ ಅಧಿಕಾರಿಗಳು ಸಹಿತ ೧೦೦ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಮುಂಜಾನೆ ದಿಢೀರ್‌ ಕಾರ್ಯಾಚರಣೆ ನಡೆಸಿದ ಪೊಲೀಸರು (Raid on jail) ಜೈಲಿನ ಪ್ರತಿ ಬ್ಯಾರಕ್‌ ತಪಾಸಣೆ ನಡೆಸಿದ್ದಾರೆ. ನಿಷೇಧಿತ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಈ ವೇಳೆ ಯಾವುದೇ ನಿಷೇದಿತ ವಸ್ತುಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ನಟ ದರ್ಶನ್‌ (Actor Darshan) ಗ್ಯಾಂಗ್‌ನ ಇಬ್ಬರು ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ (Parappana agrahar) ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಳ್ಳುವ ಪೂರ್ವದಲ್ಲಿ ನಡೆದಿರುವ ಈ ದಾಳಿ ಮಹತ್ವದ ಪಡೆದುಕೊಂಡಿದೆ.

ಇದನ್ನೂ ಓದಿ : ರಾಧಾಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಮಿಂಚಿದ ಪುಟಾಣಿಗಳು