ಭಟ್ಕಳ (Bhatkal): ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ (forest area) ಇಸ್ಪೀಟ್‌ ಜೂಜಾಟ ಆಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ (Police raided) ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೋಟೆಬಾಗಿಲು ನಿವಾಸಿ ಮಣಿಕಂಠ ಮಾಸ್ತಿ ನಾಯ್ಕ (೨೯), ಹರಕಲಿ ನಿವಾಸಿ ಸಚಿನ ಮಂಜುನಾಥ ನಾಯ್ಕ(೩೨), ಗುಮ್ಮನಹಕ್ಲ ವಾಸಿ ಸುಬ್ರಮಣ್ಯ ಮಾಸ್ತಿ ನಾಯ್ಕ ಮತ್ತು ಕೋಟೆಬಾಗಿಲು ವಾಸಿ ಈಶ್ವರ ನಾಯ್ಕ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಇನ್ನಿಬ್ಬರು ಪರಾರಿಯಾಗಿದ್ದಾರೆ. ಇವರೆಲ್ಲರೂ ಭಟ್ಕಳ ತಾಲೂಕಿನ ಶಿರಾಲಿ ಕೋಟೆಬಾಗಿಲಿನಲ್ಲಿರುವ ಸೇಂಟ್‌ ಥಾಮಸ್‌ ಶಾಲೆಯ ಎದುರಿನ ಅರಣ್ಯ ಪ್ರದೇಶದಲ್ಲಿ ಜೂಜಾಟ ಆಡುತ್ತಿದ್ದರು. ನಿನ್ನೆ ಸೆ.೧೪ರ ರಾತ್ರಿ ೯ ಗಂಟೆಯ ಸುಮಾರಿಗೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ (Police raided). ಪಿಎಸೈ ಭರಮಪ್ಪ ಬೆಳಗಲಿ ಪ್ರಕರಣ ದಾಖಲಿಸಿಕೊಂಡು (case registered), ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಟಿಪ್ಪರ್‌ ಡಿಕ್ಕಿ: ಮುರ್ಡೇಶ್ವರದ ಕಾರು ಚಾಲಕಗೆ ಗಾಯ