ಭಟ್ಕಳ (Bhatkal) : ಅಕ್ರಮವಾಗಿ ಜಾನುವಾರು ಮಾಂಸ ಕಟಾವು ಮಾಡುತ್ತಿದ್ದಾಗ ಬುಧವಾರ ಜ.೨೨ರಂದು ಪೊಲೀಸರು ದಾಳಿ (police raid) ನಡೆಸಿ ಮೂವರನ್ನು ಬಂಧಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಮುಗ್ದುಂ ಕಾಲೋನಿಯ ನ್ಯಾಷನಲ್ ಸ್ಟ್ರೀಟ್ ನಿವಾಸಿಗಳಾದ ನಿಜಾಮುದ್ದೀನ ತಂದೆ ಮೊಹಮ್ಮದ ಇಸಾಕ್ ಮುಕ್ತಸರ (೬೦), ಮೊಹಮ್ಮದ್ ತಸ್ವೀರ್ ತಂದೆ ಮೊಹಮ್ಮದ್ ಇಲಿಯಾಸ್ (೪೦) ಮತ್ತು ಸಿದ್ದಿಕ್ ಸ್ಟ್ರೀಟ್ ನಿವಾಸಿ ಖಾಜಾ ಅಬುಲಾಸನ್ ತಂದೆ ಅಬು ಮೊಹಮ್ಮದ್ ಟೋನ್ಸೆ (೫೫) ಬಂಧಿತರು.

ಇದನ್ನು ಓದಿ : ಜಿ.ಎಸ್.ಬಿ. ಕಲ್ಯಾಣ ಸೇವಾ ಸಮಿತಿ ವಾರ್ಷಿಕೋತ್ಸವ

ಆರೋಪಿತರು ಜ.೨೨ರಂದು ಬೆಳಿಗ್ಗೆ 5:30ಕ್ಕೆ ಭಟ್ಕಳ ಶಹರದ ಮುಗ್ಗುಂ ಕಾಲೋನಿಯ ನ್ಯಾಶನಲ್ ಸ್ಟ್ರೀಟ್‌ನಲ್ಲಿನ ನಿಜಾಮುದ್ದೀನ ಮುಕ್ತಸರ್ ಮನೆಯ ಪಕ್ಕದ ಕೋಣೆಯಲ್ಲಿ ಮಾಂಸ ಕಡಿಯುತ್ತಿದ್ದಾಗ ಪೊಲೀಸರು ದಾಳಿ (police raid) ನಡೆಸಿದ್ದಾರೆ. ಇವರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೆ ನಿರ್ಭಂದಿತ ಜಾನವಾರುವನ್ನು ಕಾನೂನು ಬಾಹಿರವಾಗಿ ಕಟಾವು ಮಾಡಿ ಮಾಂಸ ಮಾಡುತ್ತಿದ್ದರು.

ಇದನ್ನು ಓದಿ : ಭಟ್ಕಳದಲ್ಲಿನ ಗೋ ಹತ್ಯಾ ಪ್ರಕರಣ ಬಿಚ್ಚಿಟ್ಟ ಹಿಂಜಾವೇ

ದಾಳಿ ಕಾಲಕ್ಕೆ ಸುಮಾರು ೫೦ ಸಾ. ರೂಪಾಯಿ ಮಾಲ್ಯದ ೧೦೦ ಕೆ.ಜಿ ಆಗುವಷ್ಟು ಜಾನುವಾರುವಿನ ಮಾಂಸ ಹಾಗೂ ಮಾಂಸ ಕಟಾವು ಮಾಡಲು ಉಪಯೋಗಿಸಿದ ಸಲಕರಣೆ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸೋಮರಾಜ ರಾಥೋಡ ದೂರು (complaint) ದಾಖಲಿಸಿದ್ದಾರೆ.

ಇದನ್ನು ಓದಿ : ನಡೆದಿದ್ದೇನು ಗೊತ್ತಾ? ಸತ್ತವರು ಯಾರು? ಉಳಿದವರ ಕಥೆ ಏನು?