ಭಟ್ಕಳ (Bhatkal): ಅಕ್ರಮವಾಗಿ ಸ್ಕೂಟರಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಹಾಗೂ ವಾಸದ ಮನೆಯ ಮುಖ್ಯ ದ್ವಾರದ ಎದುರುಗಡೆಯ ವರಾಂಡದಲ್ಲಿ ದನದ ಮಾಂಸ ಕಟಾವು ಮಾಡುತ್ತಿರುವ ಸಮಯದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ (police raid). ಪೊಲೀಸರನ್ನು ನೋಡುತ್ತಿದ್ದಂತೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಓರ್ವ ಆರೋಪಿಯನ್ನು ಭಟ್ಕಳದ ಮೂಸಾ ನಗರ ನಿವಾಸಿ ಇಸ್ಮಾಯಿಲ್ ಹವ್ಯಾ ಇಸ್ಮಾಯಿಲ್ ಮೊಹಮ್ಮದ ಹುಸೇನ್ ಎಂದು ಗುರುತಿಸಲಾಗಿದೆ.  ಇನ್ನಿಬ್ಬರ ಆರೋಪಿತರ ಹೆಸರು ವಿಳಾಸ ತಿಳಿದು ಬಂದಿಲ್ಲ. ಆರೋಪಿಗಳು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ದನಗಳನ್ನು ಕಳುವು ಮಾಡಿಕೊಂಡು ಬಂದು ಅವುಗಳನ್ನು ಕಟಾವು ಮಾಡಿದ್ದರು.

ಇದನ್ನೂ ಓದಿ : power shutdown / ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್‌ ಇರಲ್ಲ

ಸುಮಾರು ೨೫ ಕೆಜಿ ತೂಕದ ೭೫೦೦ ರೂ ಬೆಲೆಯ ದನದ ಮಾಂಸವನ್ನು ಆರೋಪಿ ಇಸ್ಮಾಯಿಲ್‌ ಹವ್ಯಾ ಸ್ಕೂಟರ ನಂಬರ ಕೆಎ-47 ಕ್ಯೂ 4473 ನಲ್ಲಿ ಹಾಕಿಕೊಂಡು ಬದ್ರಿಯಾ ಕಾಲೋನಿಯ ಕಡೆಯಿಂದ ಮೂಸಾನಗರ ೪ನೇ ಕ್ರಾಸ್ ಮುಖಾಂತರ  ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಪೊಲೀಸರು ತಡೆದಿದ್ದಾರೆ. ಇನ್ನಿಬ್ಬರು ಆರೋಪಿತರು ೩೫ ಕೆ ಜಿ ತೂಕದ ೧೦೫೦೦ ರೂ ಬೆಲೆಯ ದನದ ಮಾಂಸವನ್ನು ಇಸ್ಮಾಯಿಲ್‌ ವಾಸದ ಮನೆಯ ಮುಖ್ಯ ದ್ವಾರದ ಎದುರುಗಡೆ ವರಾಂಡದಲ್ಲಿ ಕಟಾವು ಮಾಡುತ್ತಿರುವ ಸಮಯದಲ್ಲಿ  ಪಿ.ಎಸ್.ಐ. ತಿಮ್ಮಪ್ಪ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ (police raid).  ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಆರೋಪಿತರು ಓಡಿ ಹೋಗಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ.

ಇದನ್ನೂ ಓದಿ : Chief Justice/ ಕಾರವಾರದಲ್ಲಿ ನ್ಯಾಯಾಧೀಶರಾಗಿದ್ದವರು ಈಗ ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ