ಕಾರವಾರ : ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವ ಕಾರಣ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ಮತ್ತು ಹೊನ್ನಾವರದ (Honnavar) ಕೆಲವು ಭಾಗಗಳಲ್ಲಿ ಜ.೨೯ರಂದು ವಿದ್ಯುತ್‌ ವ್ಯತ್ಯಯ (Power Outage) ಆಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ ತಾಲೂಕು ವ್ಯಾಪ್ತಿಯ ೩೩ಕೆವಿ ಕೋಣೆ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರವ ಕಾರಣ ಜ.೨೯ ರಂದು ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ. ಕಾರವಾರ ನಗರ, ಕೋಡಿಬಾಗ, ಹಬ್ಬುವಾಡ, ಎನ್‌ಎಚ್-17, ಬೈತಕೋಲ, ಬಿಣಗಾ, ತೋಡುರ ಮತ್ತು ಅಮದಳ್ಳಿ ಗ್ರಾಮ ಪಂಚಾಯತಗಳ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ :  ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೆನು….. !

ಅದೇ ರೀತಿ,  ಹೊನ್ನಾವರದ ಕಾಸರಕೋಡ ೩೩ ಕೆವಿ ವಿದ್ಯುತ್ ಮಾರ್ಗದ ನಿರ್ವಹಣೆ ನಿಮ್ಮಿತ್ತ ಜ.೨೯ ರಂದು ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಕಾಸರಕೋಡ, ಕೆಳಗಿನೂರು, ಗುಣವಂತೆ, ಬಳಕೂರು, ಇಡಗುಂಜಿ, ಮಾಳ್ಕೋಡ, ಮಂಕಿ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Power Outage).

ಇದನ್ನೂ ಓದಿ : Book Release/ ಉಮೇಶ ಮುಂಡಳ್ಳಿಯ ತಿಂಗಳ ಬೆಳಕು ಮರುಮುದ್ರಣ