ಕಾರವಾರ (Karwar) : ಹೆಸ್ಕಾಂ (hescom) ಕುಮಟಾ (Kumta) ಉಪವಿಭಾಗದ ೩೩/೧೧ ಕೆ.ವಿ ಗೋಕರ್ಣ (Gokarna) ಉಪಕೇಂದ್ರ, ಮರಾಕಲ್ ಉಪಕೇಂದ್ರ, ಕತಗಾಲ-ಮಿರ್ಜಾನ ಮಾರ್ಗ, ಕುಮಟಾ ನಗರ ಹಾಗೂ ಚಿತ್ರಿಗಿ ಭಾಗಗಳಲ್ಲಿ ಸೆ‌.೨೫ರಂದು ವಿದ್ಯುತ್ ವ್ಯತ್ಯಯ (power shutdown) ಆಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗೋಕರ್ಣ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವದರಿಂದ ಗೋಕರ್ಣ ವ್ಯಾಪ್ತಿಯ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರು, ಗಂಗಾವಳಿ, ಓಂ ಬೀಚ್ ಫೀಡರಿನ ಎಲ್ಲಾ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ (power shutdown) ಆಗಲಿದೆ.

ಇದನ್ನೂ ಓದಿ : ನರೇಗಾ ಕೂಲಿಕಾರರ ಮಗನಿಗೆ ೭ ಚಿನ್ನದ ಪದಕ

೩೩/೧೧ ಕೆ.ವಿ ಮರಾಕಲ್ ಉಪಕೇಂದ್ರದಲ್ಲೂ ನಿರ್ವಹಣಾ ಕಾಮಗಾರಿ ಇರುವುದರಿಂದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಉಳ್ಳೂರುಮಠ, ಹೊದ್ಕೆ ಶಿರೂರು ಹಾಗೂ ಮೂರುರು ಫೀಡರಿನ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಇದನ್ನೂ ಓದಿ : ಮೈಸೂರು ದಸರಾಕ್ಕೆ ಜಿಲ್ಲೆಯ ನೋಡಲ್ ಅಧಿಕಾರಿ ನೇಮಕ

ಗ್ರಾಮೀಣ ಶಾಖೆಯ ಕತಗಾಲ-ಮಿರ್ಜಾನ, ೧೧ ಕೆ.ವಿ. ಮಾರ್ಗದಲ್ಲಿ ಮತ್ತು ನಗರ ಶಾಖೆಯ ಫೀಡರಗಳಾದ ಕುಮಟಾ ನಗರ, ಮತ್ತು ಚಿತ್ರಗಿ ಭಾಗಗಳಲ್ಲಿ ಜಂಗಲ್ ಕಟ್ಟಿಂಗ್ ಇರುವುದರಿಂದ ವಿದ್ಯುತ್ ವ್ಯತ್ಯಯ ಆಗಲಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ ೨೪ರಂದು ವಿವಿಧೆಡೆ ಅಡಿಕೆ ಧಾರಣೆ

ಮೇಲಿನ ಎಲ್ಲ ಭಾಗಗಳಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆಯೆಂದು ಕುಮಟಾ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ :  ಸಿಎಂ ಅರ್ಜಿ ವಜಾ ಬಗ್ಗೆ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯೆ