ಭಟ್ಕಳ (Bhatkal): ಜಿಲ್ಲೆಯ ಭಟ್ಕಳ (Bhatkal) ಮತ್ತು ಹೊನ್ನಾವರ (Honnavara) ತಾಲೂಕುಗಳಲ್ಲಿ ನಾಳೆ ಬುಧವಾರ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ (power shutdown). ಈ ಕುರಿತು ಭಟ್ಕಳ ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರದ ೧೧೦ ಕೆವಿ ಸಬ್ ಸ್ಟೇಷನ್‌ನಲ್ಲಿ ಬಸ್ ಬಾರ್ ರೆಡ್-ಹಾಟ್ ಜಂಪರ್ ಅನ್ನು ಬದಲಾಯಿಸಲು ಮತ್ತು ಮುರ್ಡೇಶ್ವರ ಸಬ್ ಸ್ಟೇಷನ್‌ನಲ್ಲಿ ನಿಯಮಿತ ನಿರ್ವಹಣಾ ಕಾರ್ಯವನ್ನು ನಡೆಸಲು ಅನುಕೂಲವಾಗುವಂತೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ಇಡೀ ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಿಗೆ ಈ ಅವಧಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (power shutdown) ಉಂಟಾಗಲಿದೆ. ಕುಮಟಾದ ಕೆಪಿಟಿಸಿಎಲ್, ನೋಡಲ್ ಅಧಿಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರ ಮೇಲ್ವಿಚಾರಣೆಯಲ್ಲಿ ನಿರ್ವಹಣಾ ಕಾರ್ಯ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ :  ವಿಶ್ವ ಚಾಂಪಿಯನ್ ಧನ್ವಿತಾಗೆ ಅದ್ದೂರಿ ಸ್ವಾಗತ