ದಾವಣಗೆರೆ (Davanagere) : ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಅರೇಹಳ್ಳಿ ಗ್ರಾಮದ ನಿವಾಸಿ ಪ್ರಜಾಕೀಯ (Prajakeeya) ಪಕ್ಷದ ಅಭಿಮಾನಿ ವಿದ್ಯಾ ನಾಯ್ಕ ಎಂಬುವವರು ತಮ್ಮ ಇಬ್ಬರು ಮಕ್ಕಳಿಗೂ ಪ್ರಜಾಕೀಯ ಎಂದು ನಾಮಕರಣ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿದ್ಯಾ ನಾಯ್ಕ ಹಾಗೂ ಪ್ರಿಯಾಂಕ ದಂಪತಿಗೆ ಮೂರು ವರ್ಷದ ಪುತ್ರನಿದ್ದಾನೆ. ಆತನಿಗೆ ಕೀರ್ತನ್ ಪ್ರಜಾಕೀಯ ಎಂದು ನಾಮಕರಣ ಮಾಡಲಾಗಿತ್ತು. ಇದೀಗ ಎರಡನೇ ಪುತ್ರನಿಗೂ ಕರ್ಣ ಪ್ರಜಾಕೀಯ ಎಂದು ನಾಮಕರಣ ಮಾಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ತೊಟ್ಟಿಲು ತೂಗುವ ಶಾಸ್ತ್ರಕ್ಕೂ ಮುನ್ನ ಕರ್ಣ ಪ್ರಜಾಕೀಯ (Prajakeeya) ಎಂದು ಹೆಸರನ್ನು ಮಗುವಿನ ಕಿವಿಯಲ್ಲಿ ಹೇಳುವ ಮೂಲಕ ನಾಮಕರಣ ಮಾಡಲಾಗಿದೆ.
ಇದನ್ನೂ ಓದಿ : Bhatkal/ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ವೃದ್ಧ
“ಪಕ್ಷದ ಮೇಲಿನ ಅಭಿಮಾನದಿಂದ ಕೀರ್ತನ್ ಪ್ರಜಾಕೀಯ, ಕರ್ಣ ಪ್ರಜಾಕೀಯ ಎಂದು ನಾಮಕರಣ ಮಾಡಿದ್ದೇನೆ. ಜಾತಿ ಮತ್ತು ರಾಜಕೀಯ ಕೇವಲ ರಾಜಕೀಯದಲ್ಲಿ ಮಾತ್ರ ಇಲ್ಲ, ಅದು ಜನರ ಮನಸ್ಥಿತಿಯಲ್ಲಿಯೇ ಬೇರೂರಿದೆ. ಅದು ನನ್ನ ಮನಸ್ಥಿತಿಯಿಂದಲೇ ಮೊದಲು ಬದಲಾಗಲಿ” ಎಂದು ವಿದ್ಯಾ ನಾಯ್ಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Lokayukta raid/ ಕೆಯುಡಿಎ ಅಧಿಕಾರಿ ಬಂಧನ
ಕೆಲ ವರ್ಷಗಳ ಹಿಂದೆ ಕಾರಿಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರೇಹಳ್ಳಿ ಕ್ಷೇತ್ರದ ಚುನಾವಣೆ ವೇಳೆ ಪಕ್ಷದ ಸಂಸ್ಥಾಪಕ ನಟ ಉಪೇಂದ್ರ (Actor Upendra) ಗ್ರಾಮಕ್ಕೆ ಆಗಮಿಸಿದ್ದರು. ಪ್ರಚಾರದ ವೇಳೆ ಪಕ್ಷದ ಸಿದ್ಧಾಂತಗಳನ್ನು ಒತ್ತಿ ಹೇಳಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದರು. ಅಂದಿನಿಂದ ಈ ಅರೇಹಳ್ಳಿ ಗ್ರಾಮದಲ್ಲಿ ಪ್ರಜಾಕೀಯ ಪಕ್ಷದ ಹವಾ ಜೋರಾಗಿದೆ ಎನ್ನಲಾಗಿದೆ. ಅರೇಹಳ್ಳಿ ಕ್ಷೇತ್ರದಿಂದ ಚೇತನಕುಮಾರ ಗೆದ್ದಿದ್ದರು. ಇದೇ ಗ್ರಾಮದ ವಿದ್ಯಾನಾಯ್ಕ ತನ್ನ ಮಕ್ಕಳಿಗೆ ಪಕ್ಷದ ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.
ನಾಮಕರಣ ಕಾರ್ಯಕ್ರಮದ ವಿಡಿಯೋವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : Tribute to Sukri Gowda/ ಹಾಲಕ್ಕಿ ಸಂಪ್ರದಾಯ ಜೀವಂತವಾಗಿರಿಸಿದ ಸುಕ್ರಜ್ಜಿ ಕಂಠ