ಹುಬ್ಬಳ್ಳಿ (Hubballi) : ಎಲ್ಲೇ ಆಗಲಿ ವಕ್ಫ್ ಆಸ್ತಿ ಮಾಡಲು ಬಂದರೆ ಅವರನ್ನು ಓಡಿಸಿ ಎಂದು ಕೇಂದ್ರ ಸಚಿವ (Central Minister) ಪ್ರಲ್ಹಾದ ಜೋಶಿ (Pralhad Joshi) ಕರೆ ಕೊಟ್ಟಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಯಾರೇ ಆಗಲಿ ಯಾವುದೇ ವಕ್ಫ್ ಆಸ್ತಿ (Waqf property) ಮಾಡಲೆಂದು ಬಂದರೆ ಅಲ್ಲಿನ ಜನರೆಲ್ಲಾ ಸೇರಿ ಓಡಿಸಬೇಕು. ಕಾಂಗ್ರೆಸ್ ಪಕ್ಷದವರು ಮಹಾನ್ ಕಳ್ಳರಿದ್ದಾರೆ. ತುಷ್ಟೀಕರಣ ರಾಜಕಾರಣದ ಪರಾಕಾಷ್ಟೆ ತಲುಪಿದ್ದಾರೆ. ಯಾವುದೇ ಸಂದರ್ಭದಲ್ಲಿ ನಿಮ್ಮ ಆಸ್ತಿಯನ್ನು ವಕ್ಫ್ ಮೂಲಕ ಕಬಳಿಸಬಹುದು ಎಚ್ಚರ ವಹಿಸಿ ಎಂದು ಪ್ರಲ್ಹಾದ ಜೋಶಿ (Pralhad Joshi) ಜನತೆಗೆ ಕರೆ ನೀಡಿದರು.

ಇದನ್ನೂ ಓದಿ :  ಪೊಲೀಸ್‌ ಅಧಿಕಾರಿಯ ಸೋಗಿನಲ್ಲಿ ೩.೮೦ ಲಕ್ಷ ರೂ. ವಂಚನೆ

ಪ್ರತಿ ತಿಂಗಳು RTC ನೋಡುತ್ತೀರಿ: ಈಗಿನ ಸರ್ಕಾರದಲ್ಲಿ ಯಾರದ್ದು ಯಾವ ಜಮೀನು ವಕ್ಫ್ ಆಸ್ತಿ ಎಂದಾಗುತ್ತದೋ ಗೊತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರತಿ ತಿಂಗಳು ತಮ್ಮ RTC ತೆಗೆದು ನೋಡುತ್ತೀರಿ ಎಂದೂ ಇದೇ ವೇಳೆ ಕರೆ ಕೊಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಹೋಗೋವರೆಗೆ ಮತ್ತು ಲೋಕಸಭೆಯಲ್ಲಿನ ವಕ್ಫ್ ಅಮೆಂಡ್ಮೆಂಟ್ ಬಿಲ್ (Waqf ammendment bill) ಪಾಸಾಗೋವರೆಗೂ ಆಗಾಗ ಎಲ್ಲಾರೂ ಪಹಣಿ ಪರಿಶೀಲಿಸುತ್ತಿರಿ ಎಂದು ಸಲಹೆ ನೀಡಿದರು. ಈ ವೇಳೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ಎಂಎಲ್ಸಿ ರವಿಕುಮಾರ, ಮಾಜಿ ಶಾಸಕಿ ಸೀಮಾ ಮಸೂತಿ ಇದ್ದರು.

ಸುದ್ದಿಗೋಷ್ಠಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಮನೆಯಲ್ಲಿಯೇ ಕುಸಿದು ಬಿದ್ದು ಯುವತಿ ಸಾವು