ಭಟ್ಕಳ (Bhatkal) : ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕುಕನೀರ ವೆಂಕಟಾಪುರ ಹೊಳೆಯ ದಂಡೆ ಮೇಲೆ ಗರ್ಭಿಣಿ ಜಾನುವಾರನ್ನು (Pregnant cattle) ಹತ್ಯೆಗೈದು ಗೋ ಭಕ್ಷಕರು ಅದರ ಅಂಗಾಂಗ ಹಾಗೂ ಹೊಟ್ಟೆಯಲ್ಲಿರುವ ಕರುವಿನ ಭ್ರೂಣ ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಾರೋ ಗೋ ಭಕ್ಷಕರು ಗರ್ಭಿಣಿ ಜಾನುವಾರುವನ್ನು (Pregnant cattle) ಹಿಂಸಾತ್ಮವಾಗಿ ವಧೆ ಮಾಡಿ ಅದರ ಅಂಗಭಾಗಗಳನ್ನು ಮತ್ತು ಹೊಟ್ಟೆಯಲ್ಲಿರುವ ಕರುವಿನ ಭ್ರೂಣವನ್ನು ವೆಂಕಟಾಪುರ ಕುಕ್ಕನೀರ ಹೊಳೆಯ ದಂಡೆ ಮೇಲೆ ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದಾರೆ. ಬೀದಿ ನಾಯಿಯೊಂದು ಚೀಲವನ್ನು ಹರಿಯುವ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಳಿಕ ವಿಷಯ ತಿಳಿದು ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ (Complaint) ದಾಖಲಾಗಿದೆ.
ಇದನ್ನೂ ಓದಿ : online game/ ಪಾನಿ ಪುರಿಗೆ ಇಲಿ ಪಾಷಾಣ ಸೇರಿಸಿ ತಿಂದ ಭಟ್ಕಳದ ಯುವಕ !