ಭಟ್ಕಳ (Bhatkal) : ಸಮಾಜದ ನಾಲ್ಕು ವರ್ಣಗಳನ್ನು ದಾಟಿ ಕಟ್ಟಕಡೆಯ ವ್ಯಕ್ತಿಗೂ ಕೂಡ ಭಗವದ್ಗೀತೆ (Bhagavad Gita) ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಹೇಳಿದರು. ಅವರು ಭಟ್ಕಳ ಎಜ್ಯುಕೇಶನ ಟ್ರಸ್ಟ ಮತ್ತು ಗಜಾನನ ಗಣಪತಿ ಕೊಲ್ಲೆ ರಾಯ್ಕರ ಫೌಂಡೇಶನ್ ಇವರು ಆಯೋಜಿಸಿದ್ದ ನಾಲ್ಕನೇ ವರ್ಷದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ, ಹೊನ್ನಾವರ(Honnavar), ಕುಮಟಾ (Kumta) ಮತ್ತು ಬೈಂದೂರು (Bynd00r) ತಾಲೂಕಿನ ಆಯ್ದ ಸರಕಾರಿ / ಅನುದಾನಿತ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಕರಾವಳಿ (Coastal) ಭಾಗದ ಶಿಕ್ಷಣ (ಬಿ.ಎಡ್.) ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಒಟ್ಟು ೩೩ ವಿಭಾಗಗಳಲ್ಲಿ ಪ್ರತ್ಯೇಕವಾಗಿ ೩೩ ಪ್ರಥಮ, ೩೩ ದ್ವಿತೀಯ ಮತ್ತು ೯೯ ತೃತೀಯ ಒಟ್ಟು ಮೊತ್ತ ೧,೪೮,೫೦೦ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ಸಮಾಜದ ಎಲ್ಲ ಸ್ತರದ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಅತ್ಯಂತ ಸಂತಸವನ್ನು ತಂದಿದೆ ಎಂದು ರಾಜೇಶ ನಾಯಕ ಹೇಳಿದರು.
ಇದನ್ನೂ ಓದಿ : NWKRTC/ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್ ಸೌಲಭ್ಯ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಮುಗ್ವಾ ಸೇವಾ ಸಮಿತಿಯ ಕಾರ್ಯದರ್ಶಿ ಎನ್.ಎಮ್.ಭಟ್ ಮಾತನಾಡಿ, ಭಗವದ್ಗೀತಾ (Bhagavad Gita) ಕಂಠಪಾಠ ಸ್ಫರ್ಧೆಯಲ್ಲಿ ಭಾಗವಹಿಸುವುದೇ ಒಂದು ಪುಣ್ಯದ ಕೆಲಸ. ಆ ಕೆಲಸದಲ್ಲಿ ಭಾಗವಹಿಸಿದ ನಾವೆಲ್ಲರೂ ದೇವರ ಕೃಪೆಗೆ ಪಾತ್ರರಾಗಿದ್ದೇವೆ. ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟವರಿಗೆಲ್ಲ ಆ ಭಗವಂತನ ಕೃಪೆ ಸದಾ ಇರಲಿ ಎಂದು ಹೇಳಿದರು.
ಇದನ್ನೂ ಓದಿ : ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದ ಶಾಲಾ ಬಸ್ ಪಲ್ಟಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ, ಮೊದಲ ವರ್ಷ ಭಟ್ಕಳ ತಾಲೂಕಿನ ವಿದ್ಯಾ ಸಂಸ್ಥೆಗಳಿಗಷ್ಟೇ ಸೀಮಿತವಾಗಿದ್ದ ಈ ಅಭಿಯಾನ ನಾಲ್ಕನೇ ವರ್ಷ ನಾಲ್ಕು ತಾಲೂಕುಗಳಿಗೆ ವ್ಯಾಪಿಸಿದೆ. ಮುಂದಿನ ವರ್ಷ ಅಂಕೋಲಾ ಮತ್ತು ಕಾರವಾರ ತಾಲೂಕುಗಳನ್ನು ಸಹ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂಓದಿ: ಹೀಗೊಂದು ಹಾಲು ಕರೆವ ಸ್ಪರ್ಧೆ
ಟ್ರಸ್ಟಿಗಳಾದ ರಮೇಶ ಖಾರ್ವಿ, ಗುರುದತ್ತ ಶೇಟ, ಕಲಾಸೌರಭದ ಅಧ್ಯಕ್ಷ ಕೇದಾರ ಕೊಲ್ಲೆ ಮಾತನಾಡಿದರು. ಸ್ಪರ್ಧೆಯ ಸಂಯೋಜಕ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಕಾಲೇಜಿನ ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಸ್ವಾಗತಿಸಿದರು. ಉಪನ್ಯಾಸಕರಾದ ಶಿವಾನಂದ ಭಟ್ ಮತ್ತು ವಿಶ್ವಾಸ ಪ್ರಭು ನಿರೂಪಿಸಿದರು. ನ್ಯೂ ಇಂಗ್ಲೀಷ ಶಾಲೆಯ ಮುಖ್ಯಾಧ್ಯಾಪಕ ಗಣಪತಿ ಶಿರೂರು ವಂದಿಸಿದರು.
ಇದನ್ನೂ ಓದಿ : ಭಟ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಇವರು…