ಭಟ್ಕಳ: ಭಟ್ಕಳಕ್ಕೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನು ಭಟ್ಕಳ ನೌಕರರ ಸಂಘದ ಮುಖಂಡರು ಭೇಟಿ ಮಾಡಿ ತಮ್ಮಸಮಸ್ಯೆಯನ್ನು ಸವಿವರವಾಗಿ ಸಚಿವರ ಮುಂದೆ ಪ್ರಸ್ತಾಪಿಸಿದರು(proposal).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

೨೦೧೭ರ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ, ಪಿ.ಎಸ್‌.ಟಿ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು,
ಮುಖ್ಯಧ್ಯಾಪಕರ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಹಾಗೂ ವರ್ಗಾವಣೆ ಸಮಯದಲ್ಲಿ ೬-೭ನೇ ತರಗತಿಯ ಖಾಲಿ ಹುದ್ದೆಗೆ ಪಿ.ಎಸ್‌.ಟಿ. ಶಿಕ್ಷಕರಿಗೆ ಅವಕಾಶ ನೀಡಬೇಕು ಎಂದು ತಮ್ಮ ಬೇಡಿಕೆಯನ್ನು (proposal) ಸಚಿವರ ಮುಂದೆ ಹೇಳಿಕೊಂಡರು.

ಇದನ್ನೂ ಓದಿ : ಕೆ.ಎನ್‌.ನಾಯ್ಕ ಮನೆಗೆ ಸಚಿವ ಭೇಟಿ

ಬಳಿಕ ಸಚಿವರು ಮಾತನಾಡಿ ತಮ್ಮ ವಿಷಯಗಳು ಗಮನಕ್ಕೆ ಇದ್ದು ಆಯುಕ್ತರ ಬಳಿ ಚರ್ಚಿಸಿ ಶಿಕ್ಷಕರಿಗೆ ಅನುಕೂಲವಾಗುವಂತೆ ನಿಯಮ ತಿದ್ದುಪಡಿ ಮಾಡುತ್ತೇವೆ ಎಂಬ ಭರವಸೆ ನೀಡಿದರು. ಏಳನೇ ವೇತನ ಆಯೋಗದ ಕುರಿತು ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಮುಂದೆ ಆರೋಗ್ಯ ಸಂಜೀವಿನಿ ಹಾಗೂ ಎನ್‌.ಪಿ.ಎಸ್‌. ಅನ್ನು ಒಪಿಎಸ್‌ ಮಾಡುವಂತಹದ್ದು ನಮ್ಮ ಸರ್ಕಾರದ ಮುಂದಿದೆ. ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿ ೨೦೨೦ರ ಪೂರ್ವದಲ್ಲಿ ಇದ್ದ ಖಾಲಿ ಹುದ್ದೆಯ ಭರ್ತಿಗೆ ಅವಕಾಶ ನೀಡಲು ಆದೇಶ ಮಾಡಲಾಗಿದೆ . ಹಂತ ಹಂತವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವರು ತಿಳಿಸಿದರು.

ಇದನ್ನೂ ಓದಿ : ಬ್ರಹ್ಮಾನಂದ ಶ್ರೀಗಳ ಆಶೀರ್ವಾದ ಪಡೆದ ಸಚಿವ

ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ. ಪ್ರೌಢಶಾಲಾ ದೈಹಿಕ ಶಿಕ್ಷಕರ ಸಮಸ್ಯೆಯ ಬಗ್ಗೆ ತಿಳಿಸಿದಾಗ ಪರಿಹರಿಸುವ ಭರವಸೆ ನೀಡಿದರು. ಸಚಿವರು ಸುಮಾರು ಅರ್ಧ ಗಂಟೆ ಕಾಲ ಎಲ್ಲರನ್ನೂ ಮಾತನಾಡಿಸಿ ಏನೇ ಸಮಸ್ಯೆ ಇದ್ದಲ್ಲಿ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದರು. ಇದೇ ವೇಳೆ ನೌಕರ ಸಂಘದಿಂದ ಸಚಿವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಸದಸ್ಯರಾದ ಕೇಶವ ಮೊಗೇರ, ಸಿ.ಡಿ ಪಡುವಣಿ, ಶಿಕ್ಷಕರಾದ ರಾಮಗೌಡ , ಶಂಕರ ನಾಯ್ಕ, ಶ್ವೇತಾ ನಾಯ್ಕ, ಹರೀಶ ಗೌಡ , ಪ್ರವೀಣ್ ರಾಥೋಡ, ಮಹೇಶ ನಾಯ್ಕ, ಇತರರು ಹಾಜರಿದ್ದರು.

ಇದನ್ನೂ ಓದಿ : ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಟ್ಕಳ ಬಿಜೆಪಿ ಮುಖಂಡರು ಭಾಗಿ