ಭಟ್ಕಳ (Bhatkal) : ಮಹತೋಭಾರ ಮುರುಡೇಶ್ವರ (Murudeshwar) ಜಾತ್ರೆಯಲ್ಲಿ ಸೋಮವಾರ ಸಂಜೆ ಆಟೋ ಯೂನಿಯನ್ ಹಾಗೂ ಪೊಲೀಸರ ನಡುವೆ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಘಟನೆ ಬಗ್ಗೆ ಮುರುಡೇಶ್ವರ (Murudeshwar) ಆಟೋ ಯೂನಿಯನ್ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ಜಾತ್ರೆ ವೇಳೆಯಲ್ಲಿ ಪ್ರತಿ ವರ್ಷವೂ ಬಸ್ ಸ್ಟಾಂಡ್ ಬಳಿ ಆಟೋ ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದೆವು. ಈ ವರ್ಷ ನಮ್ಮ ಎಲ್ಲಾ ಆಟೋಗಳನ್ನು ಉದ್ದೇಶಪೂರ್ವಕವಾಗಿ ಕೆನರಾ ಬ್ಯಾಂಕ್ (Canara Bank) ಬಳಿ ಬ್ಯಾರಿಕೇಡ್ ಹಾಕಿ ನಿಲ್ಲಿಸಲಾಗಿದೆ. ಅದನ್ನ ಪ್ರಶ್ನಿಸಿ ಧರಣಿಯಲ್ಲಿ ನಿರತರಾಗಿದ್ದೆವು ಎಂದರು.
ಇದನ್ನೂ ಓದಿ: ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲಿಯೇ ಸಾವು
ನಮ್ಮಿಂದ ಯಾವುದೇ ರೀತಿಯಲ್ಲಿ ಕಾನೂನಿನ ಉಲ್ಲಂಘನೆ ಆಗಿಲ್ಲ. ಪೊಲೀಸರು ನಮ್ಮನ್ನು ಕರೆದು ಮಾತಾಡಬೇಕಿತ್ತು. ರಾತ್ರಿ ಬಾಡಿಗೆ ಹೊಡೆದು ನಮ್ಮ ಹೊಟ್ಟೆಪಾಡು ನೋಡಿಕೊಳ್ಳಬೇಕು. ನಾವು ನಾಳೆ ತನಕ ಯಾವುದೇ ಬಾಡಿಗೆ ಹೊಡಿಯೋದಿಲ್ಲ ಅಂತಾ ಎಲ್ಲಾ ಆಟೋಗಳನ್ನು ಬಂದ ಇಡಲಾಗಿದೆ. ನಾಳೆ ಪೊಲೀಸರ ಬಳಿ ಮಾತುಕತೆ ನಡೆದ ನಂತರ ತೀರ್ಮಾನಿಸಲಾಗುವುದು ಎಂದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ: ಶ್ರದ್ಧಾ ಭಕ್ತಿ ಸಂಭ್ರಮದ ಕೋಕ್ತಿ ಜಾತ್ರೆ ಸಂಪನ್ನ