ಭಟ್ಕಳ (Bhatkal) : ಇಸ್ಲಾಂ (Islam) ಧರ್ಮದ ಸಂಸ್ಥಾಪಕ ಮಹ್ಮದ್ ಪೈಗಂಬರ್ (prophet Muhammed) ವಿರುದ್ಧ ಉತ್ತರ ಪ್ರದೇಶದ (Uttara Pradesh) ದಾಸ್ನಾ ದೇವಿ ದೇವಸ್ಥಾನದ ಪೀಠಾಧಿಪತಿ ಯತಿ ನರಸಿಂಹಾನಂದ ಸ್ವಾಮೀಜಿ ಹೇಳಿಕೆ ಖಂಡಿಸಿ ಭಟ್ಕಳ ತಂಜೀಮ್ (Tanzeem) ವತಿಯಿಂದ ಶಾಂತಿಯುತವಾಗಿ ಪ್ರತಿಭಟನೆ (protest) ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ ಎಂದು ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಸೋಮವಾರ ತಂಜೀಮ್ ಸಂಸ್ಥೆಯ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾವು ಮನವಿ ಕೊಡುವ ಸಂದರ್ಭದಲ್ಲಿ ಯಾವುದೇ ಮೆರವಣಿಗೆ ಮಾಡುತ್ತಿಲ್ಲ. ನಮಗೆ ಆಲ್ ಇಂಡಿಯಾ ಮುಸ್ಲಿಂ ಫೆಡರೇಶನ್ ಮೌಲಾನಾರವರು ಈ ಮೂಲಕ ಸ್ಪಷ್ಟ ಆದೇಶ ನೀಡಿದ್ದಾರೆ. ಯಾವುದೇ ಮೆರವಣಿಗೆ ಮಾಡದಂತೆ ತಿಳಿಸಿದ್ದಾರೆ. ಅದಕ್ಕಾಗಿ ನಾವು ತಾಲೂಕು ಸೌಧದ ಎದುರು ಸೇರಿ ಪ್ರತಿಭಟನೆ (protest) ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಕೊಡಲು ನಿರ್ಧರಿಸಿದ್ದೇವೆ ಎಂದರು.

ಇದನ್ನೂ ಓದಿ :  ‘ಭಟ್ಕಳ ಬಂದ್’ ಕರೆಕೊಟ್ಟ ತಂಜೀಮ್

ಉತ್ತರ ಕನ್ನಡದ ಎಲ್ಲಾ ಮುಸ್ಲಿಂ ಬಾಂಧವರಿಗೆ ನಾನು ಒಂದು ಸಂದೇಶ ಕೊಡುತ್ತೇನೆ. ಎಲ್ಲರೂ ಪ್ರತಿಭಟನೆ ಮಾಡಿ. ಶಾಂತಿಯುತ ಮಾರ್ಗದಲ್ಲಿ ಮಾಡಿ. ಈ ಬಗ್ಗೆ ಮನವಿಯನ್ನು ಕೊಡಿ. ಆದರೆ ಯಾವುದೇ ಮೆರವಣಿಗೆ, ಗಲಾಟೆ ಬೇಡ. ಈ ಬಗ್ಗೆ ಬೆಂಗಳೂರಿನಲ್ಲಿ (Bengaluru) ನಮ್ಮ ಆಲ್ ಇಂಡಿಯಾ ಮುಸ್ಲಿಂ ಫೆಡರೇಶನ್ ಮುಖ್ಯಸ್ಥರು ಮುಖ್ಯಮಂತ್ರಿಗಳೊಂದಿಗೆ (Chief minister) ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದಾರೆ ನಾವು ಅವರೊಂದಿಗೆ ಇದ್ದೇವೆ ಎಂದು ಹೇಳಿದರು.

ವಿಡಿಯೋ ಸಹಿತ ಇದನ್ನೂ ಓದಿ : ೨೦ ಕೆ.ಜಿ. ಕಡವೆ ಮಾಂಸ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಯತಿ ನರಸಿಂಹಾನಂದ ಸರಸ್ವತಿರವರು ನಮ್ಮ ಪ್ರವಾದಿ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಖಂಡನೀಯ. ಅದಕ್ಕೆ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬೇಕು. ನಾಳೆ ಅ.೧೫ ರಂದು ತಂಜೀಮ್ ಸಂಸ್ಥೆಯು ಭಟ್ಕಳ ಬಂದ್ ಗೆ ಕರೆ ನೀಡಿದೆ. ಅದಕ್ಕಾಗಿ ಎಲ್ಲರೂ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಬೇಕು ಎಂದು ಕೇಳಿಕೊಂಡರು.

ವಿಡಿಯೋ ಸಹಿತ ಇದನ್ನೂ ಓದಿ :  ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳರ ಪಾಲು

ಅಖಿಲ ಭಾರತ ಮುಸ್ಲಿಂ (Muslim) ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಇಲ್ಯಾಸ್ ಜಕ್ತಿ ಮಾತನಾಡಿ,
ಸರ್ಕಾರ ಏಕೆ ಈ ಬಗ್ಗೆ ಏನೂ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದೆ ಎಂದು ತಿಳಿಯುತ್ತಿಲ್ಲ. ಇದರಿಂದ ಇಂಥ ಕೃತ್ಯಗಳು ಹೆಚ್ಚಾಗುತ್ತಾ ಹೋಗುತ್ತದೆ. ಭಟ್ಕಳದಲ್ಲಿ ನಾವು ಶಾಂತಿಯನ್ನು ಬಯಸುತ್ತೇವೆ. ನಾಳೆಯ ಬಂದ್ ಪ್ರತಿಭಟನೆಯಲ್ಲಿ ಹಿಂದುಗಳು ಸಹ ಇಲ್ಲಿ ಶಾಂತಿ ಕಾಪಾಡುವ ಸಲುವಾಗಿ ನಮಗೆ ಬೆಂಬಲ ನೀಡುವ ಆಶಾಭಾವ ಹೊಂದಿದ್ದೇವೆ ಎಂದರು. ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಮತ್ತಿತರರು ಇದ್ದರು.

ವಿಡಿಯೋ ಸಹಿತ ಇದನ್ನೂ ಓದಿ : ಸಮುದ್ರ ಪಾಲಾಗುತ್ತಿದ್ದ ಯುವಕನ‌ ರಕ್ಷಣೆ