ಭಟ್ಕಳ (Bhatkal): ಶಿವರಾತ್ರಿ (Shivaratri) ದಿನದಂದು ಗೋಕರ್ಣದ (Gokarna) ಮಹಾಬಲೇಶ್ವರ ದೇವಸ್ಥಾನದ (Mahabaleshwar Temple) ಎದುರು ಭಟ್ಕಳ ಹವಾಲ್ದಾರಗೆ (Head Constable) ಪಿಎಸೈ (PSI) ಕಪಾಳಮೋಕ್ಷ ಮಾಡಿದ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (Police Superintendent) ಎಂ.ನಾರಾಯಣ ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಶಹರ ಠಾಣೆಯ ಹವಾಲ್ದಾರ್‌ ಅವರಿಗೆ ಗೋಕರ್ಣ (Gokarna) ಠಾಣೆಯ ಪಿಎಸೈ ಖಾದರ ಬಾಷಾ ಅವರು ಕಪಾಳಮೋಕ್ಷ ಮಾಡಿದ ಪ್ರಕರಣದ ತನಿಖೆಗೆ ಭಟ್ಕಳ ಡಿವೈಎಸ್‌ಪಿ (DySP) ಅವರಿಗೆ ಸೂಚಿಸಲಾಗಿದೆ ಎಂದು ಎಸ್ಪಿ ಎಂ.ನಾರಾಯಣ ತಿಳಿಸಿದ್ದಾರೆ. ಈ ಕುರಿತು ಅವರು ನೀಡಿರುವ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರಕಟಿಸಲಾಗಿದೆ.

ಎಸ್ಪಿ ನಾರಾಯಣ ಹೇಳಿಕೆ ನೀಡಿರುವ ವಿಡಿಯೋವನ್ನು ಭಟ್ಕಳ ಡೈರಿಯ ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಎಸ್ಪಿ ನಾರಾಯಣ ತಿಳಿಸಿರುವಂತೆ, ಫೆ.೨೬ರಂದು ಶಿವರಾತ್ರಿ ದಿನದಂದು ೫೦ ಸಾವಿರಕ್ಕೂ ಹೆಚ್ಚಿನ ಭಕ್ತರು ಬಂದಿದ್ದರು. ದೇವಸ್ಥಾನದ ಮುಂಭಾಗ ಮತ್ತು ಹಿಂಭಾಗದಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಾಗಿಲಲ್ಲಿ ನೂಕುನುಗ್ಗಲು ಆಗಿದ್ದರಿಂದ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್‌ (Lady Constable) ತಡೆದಿದ್ದರು. ಈ ವೇಳೆ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಸಮವಸ್ತ್ರ ರಹಿತರಾಗಿ ಬಂದಿದ್ದ ಕಾನ್‌ಸ್ಟೇಬಲ್‌ ಅವರು ಮಹಿಳಾ ಕಾನ್‌ಸ್ಟೇಬಲ್‌ ಅವರಿಗೆ ಏಕವಚನದಲ್ಲಿ ಸಾರ್ವಜನಿಕವಾಗಿ ಸಂಬೋಧಿಸಿದ್ದಾರೆ ಎಂದು ಮಹಿಳಾ ಕಾನ್‌ಸ್ಟೇಬಲ್‌ ತಿಳಿಹೇಳಿದ್ದಾರೆ. ಈ ವೇಳೆ ಸ್ಥಳೀಯ ಪಿಎಸೈ ಖಾದರ ಬಾಷಾ ಅವರು ಹಲ್ಲೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರಕರಣದ  ಬಗ್ಗೆ ತನಿಖೆ ನಡೆದು ವಾಸ್ತವಾಂಶ ತಿಳಿಯಲಿದೆ. ಅಲ್ಲಿಯವರೆಗೆ ಯಾರೂ ಇದರ ಬಗ್ಗೆ ಕೋಮು ಬಣ್ಣ ಹಚ್ಚಿ, ಸುಳ್ಳು ವದಂತಿ ಸೃಷ್ಟಿಸಬಾರದು ಎಂದು ಎಸ್ಪಿ ನಾರಾಯಣ ಹೇಳಿದ್ದಾರೆ.

ಪಿಎಸೈ ಕಪಾಳಮೋಕ್ಷ ಮಾಡಿದ ವೈರಲ್‌ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Best Physic/ ಭಟ್ಕಳದ ವಿದ್ಯಾರ್ಥಿಗಳ ಸಾಧನೆ