ಭಟ್ಕಳ (Bhatkal): ನಗರದ ಆನಂದ ಆಶ್ರಮ ಸಂಯಕ್ತ ಪದವಿ ಪೂರ್ವ ಕಾಲೇಜಿನ (PU College) ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕಾಲೇಜಿನ ಅಡಿಟೋರಿಯಮ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಂಡಳ್ಳಿ ಲೇಡಿ ಆಫ್ ಲುರ್ಡ್ಸ ಚರ್ಚನ ಪ್ಯಾರೀಸ್ ಪ್ರೀಸ್ಟ್ ರೆ.ಫಾ. ಪ್ರೇಮಕುಮಾರ್ ಡಿಸೋಜ ಆಶೀರ್ವಚನ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು (Mangaluru) ಪ್ರೊವಿನ್ಸ್ನ ಪ್ರೊವಿನ್ಸಿಯಲ್ ಸುಪೀರಿಯರ್ ರೆ.ಸಿ. ಕ್ಲಾರಾ ಮೆನೆಜಸ್ ಮಾತನಾಡಿ, ನಮ್ಮ ಸಂಸ್ಥೆ ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವಲ್ಲಿ ಅತ್ಯಂತ ಶ್ರಮ ವಹಿಸುತ್ತಿದೆ. ಭಟ್ಕಳದಲ್ಲಿನ ಶೈಕ್ಷಣಿಕ ಪ್ರಗತಿ ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ಇದನ್ನೂ ಓದಿ : RNS/ ಪಿಯು ಕಾಲೇಜಿನಲ್ಲಿ ವಾರ್ಷಿಕೋತ್ಸವ

ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ, ಭಟ್ಕಳದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಈ ಸಂಸ್ಥೆಯ ಕಾರ್ಯ ಜನಮೆಚ್ಚುವಂತದ್ದು. ಮಕ್ಕಳಿಗೆ ಮಾರ್ಕ್ಸಕಾರ್ಡಗಿಂತಲೂ ಕೌಶಲ್ಯ ಮುಖ್ಯವಾದುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಮಾರ್ಕ್ಸ ನೋಡುವುದಕ್ಕಿಂತ ಮೊದಲು ಕೌಶಲ್ಯವನ್ನು ಮೌಲ್ಯ ಮಾಪನ ಮಾಡುತ್ತಾರೆ. ಪಾಲಕು ಮಕ್ಕಳನ್ನು ಸಂಸ್ಕಾರಯುತವಾಗಿ ಕೌಶಲ್ಯವಂತರನ್ನಾಗಿಸುವುದು ತೀರಾ ಅಗತ್ಯವಾಗಿದೆ ಎಂದರು.

ಇದನ್ನೂ ಓದಿ :  ಪಿಡಿಒ ಪರೀಕ್ಷೆ ಹಿನ್ನೆಲೆ ವಿಶೇಷ ಬಸ್‌ !

ಪಾಲಕ ಶಿಕ್ಷಕ ಸಮಿತಿಯ ಉಪಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ವಿದ್ಯೆಯನ್ನು ಕಲಿಯುವುದು ಸುಲಭದ ಕಾರ್ಯವಲ್ಲ. ಇಲ್ಲಿ ಇಚ್ಚಾಶಕ್ತಿ  ಮತ್ತು ಛಲ ಬೇಕಾಗುತ್ತದೆ. ವಿದ್ಯೆ ಕಲಿಯುವ ಛಲವಿದ್ದವರಿಗೆ ವಯಸ್ಸು, ಮನೆಯ ಪರಿಸರ, ಬಡತನ ಯಾವುದೂ ಅಡ್ಡಿಯಾಗಲಾರದು ಎಂದರು. ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಸಂಚಾಲಕಿ ರೆ.ಸಿ. ಲೂಸಿ ಡಿಸೋಜ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲವಿನಾ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ (PU College) ಪ್ರಾಂಶುಪಾಲೆ ಸಿಸ್ಟರ್ ವಿನುತಾ ವೀಣಾ ಡಿಸೋಜ ಸ್ವಾಗತಿಸಿದರು. ಆರತಿ ಮೊಗೇರ ಹಾಗೂ ಆಶಾ ನಾಯ್ಕ ನಿರೂಪಿಸಿದರು. ಉಪನ್ಯಾಸಕಿ ಸಿಸ್ಟರ್ ಟೀನಾ ವಂದಿಸಿದರು.

ಇದನ್ನೂ ಓದಿ : bubble baby/ ಉ.ಕ. ಜಿಲ್ಲೆಯ ಮಗುವಿಗೆ ಅಸ್ಥಿಮಜ್ಜೆ ಕಸಿ