ಭಟ್ಕಳ (Bhatkal) : ತಾಲೂಕಿನ ಶಿರಾಲಿ (Shirali) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೆಮನೆಯಲ್ಲಿರುವ ಮಠದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ (Ashtabandha) ಬ್ರಹ್ಮಕಲಶೋತ್ಸವವು ಫೆ.೧೫ ರಿಂದ ೧೭ರ ತನಕ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ ದೇವಸ್ಥಾನ ಆವರಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು. ಸುಮಾರು ೧೫೦ ವರ್ಷಗಳ ಇತಿಹಾಸವನ್ನು ಈ ದೇವಸ್ಥಾನ ಹೊಂದಿದೆ. ಈಗ ಇದರ ಜೀರ್ಣೋದ್ಧಾರ ಕಾರ್ಯ ಮುಕ್ತಾಯಗೊಂಡಿದೆ. ಸದ್ಯ ಎಲ್ಲಾ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನೆರವೇರಿಸುತ್ತಿದ್ದೇವೆ. ನೂರಾರು ಭಜಕರ ಪರಿಶ್ರಮದ ಫಲವಾಗಿ, ಶ್ರೀ ಕ್ಷೇತ್ರದಲ್ಲಿ ತಮ್ಮದೆಯಾದ ಪರಿಕಲ್ಪನೆಯಲ್ಲಿ ಸೇವೆ ಸಲ್ಲಿಸಿ. ದೇವಸ್ಥಾನ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ ಫಲವಾಗಿ ಇಂದು ಜೀರ್ಣೋದ್ಧಾರ ಕಾರ್ಯ ಮುಗಿದಿದೆ ಎಂದು ಅವರು ಹೇಳಿದರು.

ಇದನ್ನು ಓದಿ : Sukri Gowda/ ಹಾಡು ನಿಲ್ಲಿಸಿದ ಜಾನಪದ ಕೋಗಿಲೆ  

ಮೊದಲ ದಿನ ಫೆಬ್ರವರಿ ೧೫ರಂದು ಬೆಳಿಗ್ಗೆ ೬ ಗಂಟೆಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ದೇವತಾ ಪ್ರಾರ್ಥನೆ, ಮಹಾ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ ವಾಚನ, ಮಾತೃಕಾ ಪೂಜನ, ದೇವನಾಂದೀ ಸಮಾರಾಧನೆ, ಋತ್ವಿಗರಣ, ಮಧುಪರ್ಕ ಪೂಜಾ, ಕೌತಕ ಪೂಜಾ, ಕೌತುಕ ಬಂಧನ, ಪಂಚಭೂತ ಪ್ರಾರ್ಥನೆ, ನಿರ್ವಿಘ್ನತಾ ಸಿದ್ಯರ್ಥವಾಗಿ ಗಣಪತಿ ಅಥರ್ವಶೀರ್ಷ ಹವನ, ಪ್ರಸಾದ ಪರಿಗ್ರಹ, ಶೋಧನ, ಜಲಾಧಿವಾಸ, ಬಿಂಬಶುದ್ದಿ ಕಲಶ ಸ್ಥಾಪನೆ ಜರುಗಲಿದೆ.

ಇದನ್ನು ಓದಿ : German Bakery / ಜರ್ಮನ್ ಬೇಕರಿ ಸ್ಫೋಟಕ್ಕೆ ೧೫ ವರ್ಷ

ಮಧ್ಯಾಹ್ನ ೧ ಗಂಟೆಯಿಂದ “ಮಹಾ ಅನ್ನಸಂತರ್ಪಣೆ”, ಸಂಜೆ ೫ ಗಂಟೆಯಿಂದ – ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ, ಕುಂಭೇಶ ಪೂಜಾ, ವಾಸ್ತು ರಾಕ್ಷೋಘ್ನ ಹವನ, ಬಲಿ, ಅಗ್ನಿಜನನ, ಅಧಿವಾಸ ಪೂಜಾ ನಡೆಯಲಿದೆ.

ಇದನ್ನು ಓದಿ : Cyber crime/ ಭಟ್ಕಳದಲ್ಲಿ ಬ್ಯಾಂಕ್ ಖಾತೆಗೆ ಕನ್ನ

ಎರಡನೇ ದಿನ ಬೆಳಿಗ್ಗೆ ೮ ಗಂಟೆಗೆ ಕುಣಿತ ಭಜನೆ, ಡೊಳ್ಳು ಕುಣಿತದೊಂದಿಗೆ ಸಮಸ್ತ ಊರಿನ ಸದ್ಭಕ್ತರ ಹಾಗೂ ಊರಿನ ಸಮಸ್ತ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಪರಮಪೂಜ್ಯ ಗುರುಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಬೆಳಿಗ್ಗೆ ೯.೪೫ಕ್ಕೆ ಗಣಪತಿ ಪೂಜಾ, ಪುಣ್ಯಾಹ, ಪ್ರತಿಷ್ಠಾಂಗ ಪೂರ್ವಾಂಗ ಹವನಗಳು ನಡೆಯಲಿವೆ.

ವಿಡಿಯೋ ಸಹಿತ ಇದನ್ನು ಓದಿ : hatchling/ ಹೊನ್ನಾವರದಲ್ಲಿ ಆಮೆ ಮರಿಗಳ ಜನನ

ಬೆಳಿಗ್ಗೆ ೧೦ ಗಂಟೆಗೆ ಜರಗುವ ಮೀನ ಲಗ್ನದ ಶುಭ ಮೂಹೂರ್ತದಲ್ಲಿ ಶ್ರೀ ಚಿತ್ರಾಪುರ ಮಠ (Chitrapura Math) ಸಂಸ್ಥಾನದ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸಿದ್ದಿವಿನಾಯಕ ದೇವರ ಪ್ರತಿಷ್ಠೆ (Ashtabandha), ಶಿಖರ ಕಲಶ ಪ್ರತಿಷ್ಠೆ, ಪ್ರಾಣಾದಿ ಆವಾಹನೆ, ಶಕ್ತಿ ತತ್ವ, ಕಲಾವೃದ್ಧಿ ಹವನ ಇತ್ಯಾದಿ ಕಾರ್ಯಾಕ್ರಮಗಳು ನಡೆಯಲಿದೆ. ಬೆಳಿಗ್ಗೆ ೧೧.೩೦ಕ್ಕೆ ಗುರುಗಳಿಂದ ಧರ್ಮಸಭೆ ಹಾಗೂ ಗುರುಗಳಿಂದ ಆಶೀರ್ವಚನ ನಡೆಲಿದೆ. ಬಳಿಕ ೧ ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಇದನ್ನು ಓದಿ : Bhatkal Gang/ ಕಾಡುಕೋಣ ಬೇಟೆಯಾಡಿದ ಭಟ್ಕಳ ಗ್ಯಾಂಗ್‌ ಸೆರೆ

ಕೊನೆಯ ದಿನವಾದ ಸೋಮವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಸ್ನಪನಾಧಿವಾಸ ಹವನ, ಪ್ರತಿಷ್ಠಾಂಗ ಶಾಂತಿ, ಪ್ರಾಯುಶ್ಚಿತಾದಿ ಶೇಷ ಹವನ ನಡೆಯಲಿವೆ. ಬೆಳಗ್ಗೆ ೯ ಗಂಟೆಗೆ ಲೋಕಕಲ್ಯಾಣಾರ್ಥ ೧೦೮ ಕಾಯಿ ಗಣಹೋಮ, ಪೂರ್ಣಾಹುತಿ, ಸ್ನಪನ ಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಆಚಾರ್ಯಾದಿ ಋತ್ವಗ್ ಸಂಭಾವನೆ, ಆಶೀರ್ವಚನ ಇತ್ಯಾದಿ ಜರುಗುವುದು. ಮಧ್ಯಾಹ್ನ ೧ ಗಂಟೆಯಿಂದ “ಮಹಾ ಅನ್ನಸಂತರ್ಪಣೆ” ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಇದನ್ನು ಓದಿ : Heart check up/ ಉಚಿತ ಹೃದಯ ತಪಾಸಣಾ ಶಿಬಿರ

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಿವಾನಂದ ಕಾಮತ, ಗೌರವ ಕಾರ್ಯದರ್ಶಿ ನಾಗೇಶ ದೇವಾಡಿಗ, ಅಧ್ಯಕ್ಷ ಮಂಜುನಾಥ ನಾಯ್ಕ, ದೇವಸ್ಥಾನದ ಅರ್ಚಕ ಗೋವಿಂದ ಮಂಜುನಾಥ ಭಟ್ಟ , ಗೋಪಾಲ ಮೊಗೇರ, ರಾಮಪ್ಪ ಮೊಗೇರ, ಶಿವಾನಂದ ಭಟ್ಟ , ರಾಜೇಶ ಮೊಗೇರ, ಮಂಗಳ ಗೊಂಡ, ಸಿ.ಎಮ್. ಭಟ್ಟ, ಶಿವಾನಂದ ಮೊಗೇರ, ಮಣಿಕಂಠ ನಾಯ್ಕ ಉಪಸ್ಥಿತರಿದ್ದರು.

ಸಾಲೆಮನೆ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವಿಡಿಯೋವನ್ನು  ಯೂಟ್ಯೂಬ್ಇನ್ಸ್ಟಾಗ್ರಾಂ ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನು ಓದಿ : Book Release/ ಮಧುರಗಾನ ಪುಸ್ತಕ ಬಿಡುಗಡೆ