ಭಟ್ಕಳ (Bhatkal) : ರಾಜ್ಯೋತ್ಸವ (Rajyotsava) ಮಾಸದ ಅಂಗವಾಗಿ ಕನ್ನಡ (Kannada) ಕಾರ್ತಿಕ ಅನುದಿನ ಅನುಷ್ಪಂದನ ಕಾರ್ಯಕ್ರಮದ ಅಡಿಯಲ್ಲಿ ಉತ್ತರ ಕನ್ನಡ (uttarakannada) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮುರುಡೇಶ್ವರ (Murudeshwar) ಬೆದ್ರಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ನಾಡುನುಡಿ ರಸಪ್ರಶ್ನೆ ಸ್ಪರ್ಧೆ (quiz competition) ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಸ್ಪರ್ಧೆಯಲ್ಲಿ ಜಾನ್ವಿ ರಾಮ ನಾಯಕ ಪ್ರಥಮ ಸ್ಥಾನ, ರಚಿತಾ ಭಾಸ್ಕರ್ ನಾಯ್ಕ ದ್ವಿತೀಯ ಸ್ಥಾನ, ಪ್ರಣಿತ ಚಂದ್ರ ನಾಯ್ಕ ಹಾಗೂ ಸಿಂಚನ ಅಣ್ಣಪ್ಪ ನಾಯ್ಕ ತೃತೀಯ ಸ್ಥಾನ ಪಡೆದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ಶಾಲಾ ಮುಖ್ಯಾಧ್ಯಾಪಕಿ ಹಾಗೂ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯೆ ಪೂರ್ಣಿಮಾ ಕರ್ಕಿಕರ್ ಹಾಗೂ ಶಿಕ್ಷಕ ವೃಂದದವರು ನಿರ್ವಹಿಸಿದರು.

ಇದನ್ನೂ ಓದಿ : ಸಮುದ್ರದಲ್ಲಿ ಮುಳುಗಿ ಕಾರವಾರದ ವ್ಯಕ್ತಿ ಸಾವು

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪುಸ್ತಕ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಲೇಖನಿಯನ್ನು ಬಹುಮಾನವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ಉಲ್ಲಾಸ ನಾಯ್ಕ, ಉಮಾದೇವಿ, ನಯನಾ ನಾಯ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ತೆಂಗಿನಗುಂಡಿಯಲ್ಲಿ ಕರಾಟೆ ಮಾಸ್ಟರ್ ಕಟ್ಟಡ ಧ್ವಂಸ

ರಸಪ್ರಶ್ನೆ ಸ್ಪರ್ಧೆಯಲ್ಲಿ (quiz competition) ಪಾಲ್ಗೊಂಡ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ. ಕಾರ್ಯಕ್ರಮ ಸಂಘಟಿಸಲು ಸಹಕರಿಸಿದ ಬೆದ್ರಮನೆ ಶಾಲೆಯ ಮುಖ್ಯಾಧ್ಯಾಪಕಿ ಹಾಗೂ ಶಿಕ್ಷಕವೃಂದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದ ದಾಳಿ ಬಗ್ಗೆ ಲೋಕಾಯುಕ್ತ ಎಸ್ಪಿ ಹೇಳಿದ್ದೇನು?