ಭಟ್ಕಳ (Bhatkal): ಮುಡೇಶ್ವರದ (Murdeshwar) ಬಸ್ತಿ ಬಾಕಡಕೇರಿ ರೈಲ್ವೆ ಟ್ರಾಕ್ (railway track) ಹತ್ತಿರ ಕೋಳಿ ಅಂಕದ ಮೇಲೆ ದಾಳಿ (raid) ನಡೆಸಿದ ಮುರುಡೇಶ್ವರ (Murudeshwar) ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಒಟ್ಟು ೭ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಾಲಿ ಕೋಟೆಬೈಲು ನಿವಾಸಿ ರವಿ ಶನಿಯಾರ ನಾಯ್ಕ(೩೮) ಮತ್ತು ಹಾಡುವಳ್ಳಿಯ ಸೋಮಯ್ಯ ನಾಗಪ್ಪ ಗೊಂಡ ಬಂಧಿತರು. ಆರೋಪಿತರು ಮುರ್ಡೇಶ್ವರದ ಬಸ್ತಿ, ಬಾಕಡಕೇರಿ ರೈಲ್ವೆ ಟ್ರಾಕ್ ಹತ್ತಿರ ಕೋಳಿ ಹುಂಜಗಳ ಮೇಲೆ ಹಣವನ್ನು ಪಂತವಾಗಿ ಕಟ್ಟಿ ಜೂಜಾಡಲು ಬಂದಿದ್ದರು.
ಇದನ್ನೂ ಓದಿ : ಶಿಕ್ಷಕರ ಪರಿಶ್ರಮ ಸ್ಮರಿಸಿದ ಉಸ್ತುವಾರಿ ಸಚಿವ
ಖಚಿತ ಮಾಹಿತಿ ಮೇರೆಗೆ ಮುರುಡೇಶ್ವರ ಪಿ.ಎಸ್.ಐ. ಶಿವಕುಮಾರ ಹಾಗೂ ಸಿಬ್ಬಂದಿ ದಾಳಿ (raid) ನಡೆಸಿದ್ದಾರೆ. ದಾಳಿ ವೇಳೆ 1080 ರೂ. ನಗದು, ಒಂದು ನಿರ್ಜೀವ ಸಹಿತ ೨ ಕೋಳಿ ಹುಂಜಗಳು ಪೊಲೀಸರಿಗೆ ಸಿಕ್ಕಿದೆ. ಹುಂಡೈ ವೆನು ಹಾಗೂ ಹುಂಡೈ (hundai) ಐ10 ಕಂಪನಿಯ ಕಾರು, ಒಂದು ಆಟೋ ರಿಕ್ಷಾ, ಒಂದು ಮೋಟಾರ್ ಬೈಕ್ ಹಾಗೂ ಇನ್ನೋಂದು ನಂಬರ್ ರಹಿತ ಮೋಟಾರ್ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಐದೂ ವಾಹನಗಳ ಮಾಲೀಕರು ಪರಾರಿಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ (case registered).
ಇದನ್ನೂ ಓದಿ : ಕವನ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ