ಗೋಕರ್ಣ(Gokarna) : ಅಂದರ್‌ ಬಾಹರ್‌ ಜೂಜಾಟ ನಡೆಯುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು (raid by Police) ಒಂಭತ್ತು ಜನರನ್ನು ಬಂಧಿಸಿ(Arrested), ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered). ಬಂಧಿತರಿಂದ ೭೭,೪೮೦ ರೂ. ನಗದು, ೭ ಮೊಬೈಲ್‌, ಒಂದು ಹುಂಡೈ(Hundai) ಕಂಪನಿಯ ಸ್ಯಾಂಟ್ರೋ (santro) ಕಾರು ಸಹಿತ ಜೂಜಾಟದ ವಸ್ತುಗಳನ್ನು ವಶಕ್ಕೆ ಪಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತರಲ್ಲಿ ಏಳು ಜನರು ಕುಮಟಾ (Kumta) ತಾಲೂಕಿನವರಾದರೆ ಇನ್ನಿಬ್ಬರು ಹೊನ್ನಾವರ (Honnavar) ತಾಲೂಕಿನವರು. ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ನಾರಾಯಣ ಬೊಮ್ಮಣ್ಣ ನಾಯ್ಕ (೬೩), ಬ್ರಹ್ಮೂರರು ಖಂಡಗಾರ ವಾಸಿ ಸಂತೋಷ ಶ್ರೀನಿವಾಸ ನಾಯಕ (೪೬), ಲುಕ್ಕೇರಿ ಗ್ರಾಮದ ವಿನಾಯಕ ನಾಗು ಗೌಡ (೪೫), ಕುಮಟಾ ಹಳೇ ಬಸ್‌ ನಿಲ್ದಾಣ ಬಳಿಯ ಜಗದೀಶ ಗೋಯ್ದು ಗೌಡ (೩೦), ಬರ್ಗಿಯ ನಾಗರಾಜ ಕೃಷ್ಣ ನಾಯ್ಕ(೩೬), ಹೊನ್ಮಾಂವ್‌ ನಿವಾಸಿ ನಾಗರಾಜ ನಾಗರಾಜ ಶೆಟ್ಟಿ(೪೮), ಹಿರೇಗುತ್ತಿಯ ಉಮೇಶ ಮಾರುತಿ ಗಾಂವಕರ ಹಾಗೂ ಹೊನ್ನಾವರ ತಾಲೂಕಿನ ಹೊದ್ಕೆಶಿರೂರು ನಿವಾಸಿ ಜಯಂತ ನಾರಾಯಣ ಪಟಗಾರ (೨೮) ಮತ್ತು ಮಾಡಗೇರಿಯ ರಾಮಚಂದ್ರ ಮಾಸ್ತಿ ಪಟಗಾರ ಬಂಧಿತರು.

ಇದನ್ನೂ ಓದಿ :  ಮುರ್ಡೇಶ್ವರ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ; ಇಬ್ಬರ ಬಂಧನ

ಇವರು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ದುಬ್ಬನಶಶಿ ಗ್ರಾಮದ ಸೀ ಸ್ಪ್ರೇ ರೆಸಾರ್ಟನ ರೂಮ್ ನಂಬರ ೬ರ ಕೊಠಡಿಯಲ್ಲಿ ಜೂಜಾಡುತ್ತಿದ್ದಾಗ ಆ.೩೧ರ ರಾತ್ರಿ ೩ ಪೊಲೀಸ್‌ ದಾಳಿ ನಡೆದಿದೆ(Raid by Police). ಗೋಕರ್ಣ ಪೊಲೀಸ್‌ ಠಾಣೆಯ ಪಿಎಸ್‌ಐ ಶಶಿಧರ ಕೆ.ಎಚ್‌. ನೇತೃತ್ವದಲ್ಲಿ ದಾಳಿ ನಡೆದಿತ್ತು. ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು(Case Registered), ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Kumta journalist/ ಪತ್ರಕರ್ತರ ಜೊತೆ ಸಿಪಿಐ ವರ್ತನೆಗೆ ಖಂಡನೆ