ಭಟ್ಕಳ (Bhatkal): ತಾಲೂಕು ಸೇರಿದಂತೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ರಿಕ್ರಿಯೇಶನ್ ಕ್ಲಬ್ (Recreation Club) ಕಾನೂನುಬದ್ಧವಾಗಿ ನಡೆಯುತ್ತಿದ್ದರೂ ಪೊಲೀಸರು ಇಲ್ಲಸಲ್ಲದ ಸಬೂಬು ಹೇಳಿ ಕ್ಲಬ್ ನಡೆಯದಂತೆ ಕಿರುಕುಳ ನೀಡುತ್ತಿದ್ದಾರೆ. ಉಚ್ಚ ನ್ಯಾಯಾಲಯದ (High Court) ಆದೇಶವನ್ನು ಕೂಡ ಪಾಲಿಸುತ್ತಿಲ್ಲ ಎಂದು ಜಿಲ್ಲಾ ರಿಕ್ರಿಯೇಶನ್ ಕ್ಲಬ್ ಅಸೋಸಿಯೇಶನ್ ಅಧ್ಯಕ್ಷ ವಾಸು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಗರದಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳದ ೧೨ ಸೇರಿದಂತೆ ಜಿಲ್ಲೆಯಲ್ಲಿ ೩೦ ರಿಕ್ರಿಯೇಶನ್ ಕ್ಲಬ್‌ಗಳು (Recreation Club) ಕಾನೂನುಬದ್ಧವಾಗಿ ಲೈಸೆನ್ಸ ಪಡೆದು ಕಾರ್ಯನಿರ್ವಹಿಸುತ್ತಿವೆ. ಕ್ಲಬ್‌ನಲ್ಲಿ ರಮ್ಮಿ ಆಟ ಮಾತ್ರ ಆಡುತ್ತಿದ್ದರೂ ಸಹ ಪೊಲೀಸರು ಪದೇ ಪದೇ ಕ್ಲಬ್‌ಗೆ ಬಂದು ಪರಿಶೀಲಿಸುವ ನೆಪದಲ್ಲಿ ಆಟ ಆಡುತ್ತಿರುವವರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ. ಅಲ್ಲದೇ ಯಾವ್ಯಾವುದೋ ಸಮಯದಲ್ಲಿ ಬಂದು ಕ್ಲಬ್ ಬಂದ್ ಮಾಡುವಂತೆ ಗದರಿಸುತ್ತಾರೆ ಎಂದೂ ದೂರಿದರು.
ಇದನ್ನೂ ಓದಿ : Power Outage/ ಕಾರವಾರ, ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ
ಕ್ಲಬ್‌ನಲ್ಲಿ ಕಾನೂನು ಬಾಹಿರವಾದ ಯಾವ ಚಟುವಟಿಕೆಯೂ ನಡೆಸುತ್ತಿಲ್ಲ. ದಿನದ ೨೪ ಗಂಟೆಯೂ ಕೂಡ ನಾವು ಸಿ.ಸಿ. ಕೆಮರಾವನ್ನು ಚಾಲೂ ಇಟ್ಟಿರುತ್ತೇವೆ. ಇವರು ಬಂದು ಪರಿಶೀಲನೆ ಮಾಡುವುದಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ ಪದೇ ಪದೇ ಬಂದು ನಮ್ಮಲ್ಲಿ ಬರುವ ಆಟಗಾರರಿಗೆ ಮುಜುಗರ ಉಂಟು ಮಾಡುತ್ತಿರುವುದು ಸರಿಯಲ್ಲ. ಹೈಕೋರ್ಟ ಆದೇಶವಿದ್ದರೂ ಸಹ ಕ್ಲಬ್‌ಗಳನ್ನು ನಡೆಸಲು ಬಿಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ : ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೆನು….. !
ಕಳೆದ ಆರು ತಿಂಗಳಿನಿಂದ ಜಿಲ್ಲೆಯಲ್ಲಿ ರಿಕ್ರಿಯೇಶನ್ ಕ್ಲಬ್‌ಗಳಿಗೆ ಕಿರುಕುಳ ನೀಡಲಾಗುತ್ತಿದೆ. ಜ.೨೮ರಿಂದ ಎಲ್ಲಾ ಕ್ಲಬ್‌ಗಳನ್ನು ನಾವು ಪುನರಾರಂಭ ಮಾಡುತ್ತಿದ್ದೇವೆ. ಕ್ಲಬ್‌ಗಳು ಬೈಲಾ ಮತ್ತು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಇಲಾಖೆಗೆ ನಾವು ಯಾವ ಸಂದರ್ಭದಲ್ಲಿ ಬೇಕಾದರೂ ಸಿಸಿ ಟಿವಿ ಫೂಟೇಜ್‌ಗಳನ್ನು ನೀಡಲು ಸಿದ್ಧರಿದ್ದೇವೆ. ನಮ್ಮ ಚಟುವಟಿಕೆಗಳು ಕಾನೂನುಬಾಹಿರ ಇದ್ದರೆ ಅವರು ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದರು.
ಇದನ್ನೂ ಓದಿ : Book Release/ ಉಮೇಶ ಮುಂಡಳ್ಳಿಯ ತಿಂಗಳ ಬೆಳಕು ಮರುಮುದ್ರಣ
ಬೇರೆ ಜಿಲ್ಲೆಗಳಲ್ಲಿ ಕ್ಲಬ್‌ಗಳು ಯಾವುದೇ ತೊಂದರೆ ಇಲ್ಲದೇ ಕಾರ್ಯನಿರ್ವಹಿಸುತ್ತಿದೆ. ಆದರೆ ಉತ್ತರ ಕನ್ನಡದಲ್ಲಿ ಮಾತ್ರ ರಿಕ್ರಿಯೇಶನ್ ಕ್ಲಬ್ ಕಾರ್ಯನಿರ್ವಹಣೆಗೆ ಅಡೆತಡೆ ಉಂಟಾಗಿದೆ. ಇದರಿಂದ ಟೈಮ್‌ಪಾಸ್‌ಗಾಗಿ ಆಡಲು ಬರುವ ಸದಸ್ಯರಿಗೆ ಬೇಸರವಾಗಿದೆ. ಕ್ಲಬ್‌ಗೆ ಕಿರುಕುಳ ನೀಡುತ್ತಿರುವ ಬಗ್ಗೆ ನಾವು ಜಿಲ್ಲಾ ಎಸ್ಪಿ, ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಇನ್ನೂ ಉತ್ತರ ಬಂದಿಲ್ಲ ಎಂದು ವಾಸು ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : Namadhari/ ಫೆ.೨ರಿಂದ ೫ರವರೆಗೆ ನಾಮಧಾರಿ ಗುರುಮಠದಲ್ಲಿ ವರ್ಧಂತಿ ಮಹೋತ್ಸವ
ನಾವು ಜಿಲ್ಲೆಯಲ್ಲಿ ರಿಕ್ರಿಯೇಶನ್ ಕ್ಲಬ್ ಪುನಾರಂಭಿಸಲು ನಿರ್ಧರಿಸಿದ್ದು, ಇದಕ್ಕೆ ಎದುರಾಗುವ ಕಾನೂನಾತ್ಮಕ ಹೋರಾಟಕ್ಕೂ ಮುಂದಾಗಿದ್ದೇವೆ ಎಂದು ಸವಾಲೆಸೆದಿರುವ ವಾಸು ನಾಯ್ಕ, ಪೊಲೀಸ್ ಇಲಾಖೆ ಕಾನೂನುಬದ್ಧವಾಗಿ ನಡೆಸುತ್ತಿರುವ ರಿಕ್ರಿಯೇಶನ್ ಕ್ಲಬ್‌ಗೆ ಯಾವುದೇ ರೀತಿಯ ಕಿರುಕುಳ, ತೊಂದರೆ ನೀಡಬಾರದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ಪರಮೇಶ್ವರ ಭಟ್ಟ ಶಿರಸಿ, ಗಿರೀಶ ನಾಯ್ಕ, ಸಂದೀಪ ಪೂಜಾರಿ, ಜಟ್ಟಪ್ಪ ನಾಯ್ಕ, ವಿನಯ ಪಡಿಯಾರ, ನಾಗರಾಜ ಶೆಟ್ಟಿ, ಅನಿಲ ಶಿರಸಿಕರ್, ತಿಮ್ಮಪ್ಪ ನಾಯ್ಕ ಮುಂತಾದವರಿದ್ದರು.
ಇದನ್ನೂ ಓದಿ : weather forecast / ಕರಾವಳಿ ಸಹಿತ ಹಲವೆಡೆ ಮಳೆ