ಕಾರವಾರ (Karwar) : ಭಾರತೀಯ ಹವಾಮಾನ ಇಲಾಖೆಯ (IMD) ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ (coastal) ಭಾಗದಲ್ಲಿ ಮೇ ೨೪ರಿಂದ ೨೭ರವರೆಗೆ ರೆಡ್ ಅಲರ್ಟ್ (Red Alert) ಇದ್ದು, ಈ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚನೆಯಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅರಬ್ಬಿ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತವಾಗಿದ್ದು, ಹೆಚ್ಚಿನ ಗಾಳಿ ಬೀಸುವ ಸಾಧ್ಯತೆಯಿದೆ (Red Alert). ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ  ಸೂಚನೆಗಳನ್ನು ನೀಡಲಾಗಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಗುಂಟ ಮಾಜಾಳಿಯಿಂದ ಭಟ್ಕಳದವರೆಗೆ ಹೈ ಟೈಡ್ ಎಚ್ಚರಿಕೆ ನೀಡಲಾಗಿದೆ. ಮೇ ೨೪ರಂದು ಬೆಳಗ್ಗೆ ೮.೩೦ ರಿಂದ ರಾತ್ರಿ ೮.೩೦ರ ವರೆಗೆ ೨.೭-೩.೩ ಮೀಟರ್ ವ್ಯಾಪ್ತಿಯ ಎತ್ತರದ ಅಲೆಗಳು ಏಳಲಿವೆ ಎಂಬ ಮುನ್ಸೂಚನೆ ಇದೆ. ಸಮುದ್ರ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ : Kattalan/ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ “ಕಾಟ್ಟಾಲನ್‌” ಸಿದ್ಧತೆ

ಉತ್ತರ ಕನ್ನಡ ಕರಾವಳಿಯಲ್ಲಿ ಮಾಜಾಳಿಯಿಂದ ಭಟ್ಕಳದ ವರೆಗೆ ಅಲೆಗಳ ಉಬ್ಬರ ಎಚ್ಚರಿಕೆ ನೀಡಲಾಗಿದೆ. ಮೇ ೨೨ ಸಂಜೆ ೫.೩೦ ರಿಂದ ಮೇ ೨೩ರ ಸಂಜೆ ೫.೩೦ರವರೆಗೆ ೧೩-೧೬ ಸೆಕೆಂಡುಗಳ ಅವಧಿಯಲ್ಲಿ ೧-೧.೬ಮೀ ಎತ್ತರದ ಅಲೆಗಳು ಏಳಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ದೋಣಿಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಇದನ್ನೂ ಓದಿ : Sammys Dreamland/ ಅವಳಿ ಯೋಜನೆಗಳ ಅನಾವರಣ