ಭಟ್ಕಳ (Bhatkal) : ೨೦೭ನೇ ಐತಿಹಾಸಿಕ ಭೀಮ್ ಕೋರೆಗಾಂವ್ ಯುದ್ಧದ ವಿಜಯೋತ್ಸವ ದಿನಾಚರಣೆಯಂದು ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿತ್ರಾಪುರದ ಬಾಕಡಕೇರಿಗೆ ಅಂಬೇಡ್ಕರ್ ಕಾಲೋನಿ ಎಂದು ಸ್ಥಳೀಯರು ಮರುನಾಮಕರಣ (Renaming) ಮಾಡಿದ್ದಾರೆ. ಈ ಸಂದರ್ಭ ಹಿರಿಯ ಕೃಷ್ಣ ಪಂಡು ಬಾಕಡ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಮತ್ತು ಮಾಸ್ತಿ ಬಾಕಡ ಅವರು ದೀಪ ಬೆಳಗಿಸುವ ಮೂಲಕ ನೂತನವಾಗಿ ನಿರ್ಮಿಸಿದ ಅಂಬೇಡ್ಕರ್ ಕಾಲೋನಿ ವೃತ್ತವನ್ನು ಉದ್ಘಾಟಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಉದ್ಘಾಟಕರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮತ್ತು ಸಮಾನತೆಗೆ ಒತ್ತು ನೀಡಿದ್ದರು. ನಾವು ಎಲ್ಲರೂ ವಿದ್ಯಾವಂತರಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕೆಂಬುದೇ ನಮ್ಮೆಲ್ಲರ ಉದ್ದೇಶ. ಹಾಗಾಗಿ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಹಿಟ್ ಎಂಡ್ ರನ್; ಇಬ್ಬರಿಗೆ ಗಾಯ
ಬಾಕಡಕೇರಿಯಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರ ಮನೆಗಳು ಇವೆ. ಇಲ್ಲಿನ ಹಿರಿಯ ದಲಿತ ಮುಖಂಡರು, ಮಹಿಳೆಯರು ಮತ್ತು ಯುವಕರು ಎಲ್ಲರೂ ಸೇರಿ ಚರ್ಚಿಸಿ ನಮ್ಮ ಕೇರಿಗೆ ಅಂಬೇಡ್ಕರ್ ಅವರ ಸವಿನೆನಪಿಗೋಸ್ಕರ ಹೆಸರನ್ನು ಇಡಲು ನಿರ್ಣಯ ಮಾಡಲಾಗಿತ್ತು (Renaming) ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಾರಾಯಣ ಮಂಜ ಬಾಕಡ ಹೇಳಿದರು.
ಇದನ್ನೂ ಓದಿ : ವಿಮಾನದ ಶೌಚಾಲಯದಲ್ಲಿ ೨ ಕೋಟಿ ಚಿನ್ನ, ಭಟ್ಕಳದ ವ್ಯಕ್ತಿ ಬಂಧನ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ ಬಾಕಡ, ಶ್ರೀ ಚೌಡೇಶ್ವರಿ ಮಸಣಕಾಳಿ ದೇವಸ್ಥಾನ ಪ್ರಧಾನ ಅರ್ಚಕ ನಾರಾಯಣ ಬಾಕಡ, ಬಸವ ಬಾಕಡ, ಗಣಪತಿ ಬಾಕಡ, ಶಂಕರ ಬಾಕಡ, ರಾಮ ಬಾಕಡ, ಕೃಷ್ಣ ಬಾಕಡ, ಚಂದ್ರ ಬಾಕಡ, ದೇವಮ್ಮ ಬಾಕಡ, ಚೈತ್ರ ಬಾಕಡ, ನಾಗಮ್ಮ ಬಾಕಡ, ಜಯ ಬಾಕಡ, ಮಾದೇವಿ ಬಾಕಡ, ನಾರಾಯಣಿ ಬಾಕಡ , ಲಲಿತ ಬಾಕಡ, ಪಾರ್ವತಿ ಬಾಕಡ , ನಾಗವೇಣಿ ಬಾಕಡ, ಮಾಸ್ತಮ್ಮ ನಾಗರಾಜ ಬಾಕಡ ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ ಬಾಕಡ ಸ್ವಾಗತಿಸಿದರು. ಹರೀಶ ಮಾಸ್ತಿ ಬಾಕಡ ಕಾರ್ಯಕ್ರಮ ನಿರೂಪಿಸಿದರು. ಗಣಪತಿ ಬಾಕಡ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ಮತ್ತು ಭಾಸ್ಕರ ವಂದನಾರ್ಪಣೆ ಸಲ್ಲಿಸಿದರು.
ಇದನ್ನೂ ಓದಿ : ಪ್ರಶಸ್ತಿ ಪಡೆದ ಪತ್ರಕರ್ತರ ಬಗ್ಗೆ ನಿಮಗೆ ಗೊತ್ತಾ?