ಕಾರವಾರ (Karwar): ಇಲ್ಲಿನ ಕದಂಬ (Kadamba) ನೌಕಾನೆಲೆಯ (Naval Base)ನಿವೃತ್ತ ನೌಕರ ನಾಪತ್ತೆಯಾಗಿರುವ (Person Missing)ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ಮುದಗಾದಲ್ಲಿ ವಾಸವಾಗಿದ್ದ ಪಶ್ಚಿಮ ಮುಂಬೈನ (Mumbai) ಅಂಧೇರಿ (Andheri) ಮೂಲದ ಜಯಚಂದ್ರನ್ ಷಣ್ಮುಗಂ ರೆಡ್ಡಿಯಾರ್ (೫೩) ಕಾಣೆಯಾದವರು. ಕಾರವಾರದ ಕದಂಬ ನೌಕಾನೆಲೆಯಲ್ಲಿ ಸಿವಿಲಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು ೨೦೨೩ರ ಜನವರಿಯಲ್ಲಿ ಸ್ವಯಂ ನಿವೃತ್ತಿ ಪಡೆದು ಕೆಲಸದಿಂದ ಬಿಡುಗಡೆಗೊಂಡಿದ್ದರು. ಮೇ ೨೦೨೩ರವರೆಗೆ ಮುದಗಾದ ಎನ್.ಸಿ.ಎಚ್. ಕಾಲೋನಿಯ ಕ್ವಾಟರ್ಸ್‌ನಲ್ಲಿ ವಾಸವಾಗಿದ್ದ ಇವರನ್ನು ನಂತರ ಮನೆ ಖಾಲಿ ಮಾಡಿಸಲಾಗಿತ್ತು.
ಇದನ್ನೂ ಓದಿ : ಶ್ರೀಗಳ ಆಶೀರ್ವಾದ ಪಡೆದ ಜನತಾ ಬ್ಯಾಂಕ್ ನಿರ್ದೇಶಕರು
ಅದಾದ ನಂತರ ಅವರು ಅವರ್ಸಾ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ೨೦೨೩ರ ನಂತತರ ಮುದಗಾದ ಕಾಲೋನಿ ಹತ್ತಿರವಿರುವ ಬಸ್ ನಿಲ್ದಾಣದ ಬಳಿ ತಿರುಗಾಡಿಕೊಂಡು ಇರುತ್ತಿದ್ದರು. ಕಳೆದ ನಾಲ್ಕೈದು ದಿನಗಳವರೆಗೆ ಮುದಗಾದಲ್ಲಿಯೇ ಸುತ್ತಾಡುತ್ತಿದ್ದವರು, ನಂತರ ಎಲ್ಲಿಯೋ ಹೋಗಿ ನಾಪತ್ತೆಯಾಗಿದ್ದಾರೆ (Person Missing). ಈ ಕುರಿತು ಅಂಧೇರಿಯಲ್ಲಿ ವಾಸವಾಗಿರುವ ಚಯಚಂದ್ರನ್ ಪತ್ನಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಪಪೂ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ