ಕಾರವಾರ: ಕಡವಾಡ ವ್ಯಾಪ್ತಿಯಲ್ಲಿನ ಕಾರವಾರ- ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಮರಗಳು‌ ಮುರಿದು ಬೀಳುವ ಹಂತದಲ್ಲಿದ್ದು ಅಪಾಯದ ಭೀತಿ‌ ಮೂಡಿಸಿದೆ (risk forecasting).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ರಾಜ್ಯ ಹೆದ್ದಾರಿಯಲ್ಲಿನ ನಂದವಾಳದಿಂದ ಮಾರುತಿ ದೇವಸ್ಥಾನದ ಕ್ರಾಸ್ ವರೆಗಿನ ಎರಡೂ ಕಡೆ ತುಂಬಾ ಹಳೆಯದಾದ ಬೃಹತ್ ಎರಡು ಮಾವಿನ ಮತ್ತು ಒಂದು ಹುಣಿಸೆ ಮರಗಳು ಇವೆ. ಇವು ಭಾರಿ ಮಳೆ ಗಾಳಿಗೆ ಮುಖ್ಯ ರಸ್ತೆ ಮೇಲೆ ಮುರಿದು ಬೀಳುವ ಹಂತದಲ್ಲಿದೆ.

ಇದನ್ನೂ ಓದಿ : ಗಾಳಿ-ಮಳೆಗೆ ತೋಟ-ಮನೆ ಹಾನಿ

ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯಾಗಿದ್ದರಿಂದ  ಹಗಲು ರಾತ್ರಿ ಬಹಳಷ್ಟು ವಾಹನಗಳು ಸಂಚರಿಸುತ್ತವೆ. ಜನ ವಸತಿ ಪ್ರದೇಶವಾಗಿದ್ದುರಿಂದ ಪಾದಚಾರಿಗಳ ಓಡಾಟವೂ ಹೆಚ್ಚಿದೆ. ಹತ್ತಿರದಲ್ಲೇ ಅಂಗನವಾಡಿ ಕೇಂದ್ರ ಕೂಡ ಇದೆ. ಒಂದು ವೇಳೆ ಭಾರಿ ಮಳೆ ಗಾಳಿಗೆ  ಈ ಮರಗಳು ಬಿದ್ದರೆ ಅನಾಹುತ ಸಾಧ್ಯತೆ ಹೆಚ್ಚಿದೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದರೆ ದೊಡ್ಡ ದುರ್ಘಟನೆ ಸಂಭವಿಸಲಿದೆ. ಅಪಾಯದ ಮುನ್ಸೂಚನೆ (risk forecasting) ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆ ಗಮನ ಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ

ಈ ಭಾಗದಲ್ಲಿ ವಾಹನ ಸವಾರರು, ಪಾದಚಾರಿಗಳು ಹಾಗೂ ಅಂಗನವಾಡಿ ಕೇಂದ್ರಕ್ಕೆ  ಪುಟ್ಟ ಪುಟ್ಟ ಮಕ್ಕಳು ತೆರಳಲು ಭಯ ಪಡುವಂತಾಗಿದೆ. ರಸ್ತೆ ಬದಿಯ ಹಳೆಯ ಮೂರೂ  ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದರೆ ತಂತಿಗಳ ಸೆಳೆತಕ್ಕೆ ರಸ್ತೆಯುದ್ದಕ್ಕೂ ಇರುವ ವಿದ್ಯುತ್  ಕಂಬಗಳಿಗೆ ಹಾನಿಯಾಗಲಿದೆ. ಜೊತೆಗೆ ಜೀವ ಹಾನಿ ಸಂಭವಿಸಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ :  ಜಿಪಂ‌ ಮಾಜಿ ಸದಸ್ಯ ಎಂ ಎಂ ನಾಯ್ಕ ಜಾಲಿ ನಿಧನ

Raja Naik kadwad

ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ವಾಹನ ಸವಾರರ ಸಾರ್ವಜನಿಕರ ಮತ್ತು ಅಂಗನವಾಡಿ ಕೇಂದ್ರದ ಪುಟ್ಟ ಪುಟ್ಟ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ ಆಡಬಾರದು. ಕೂಡಲೇ ರಾಜ್ಯ ಹೆದ್ದಾರಿಯಲ್ಲಿನ ಕಡವಾಡ ಬಳಿ ರಸ್ತೆ ಬದಿಯ ಹಳೆಯ ಮೂರು ಮರವನ್ನು ಕಡಿದು ತೆರವು ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ವಾಟ್ಸಾಪ್ ಮೂಲಕ ಮನವಿ ಸಲ್ಲಿಸಿದ್ದೇನೆ.
– ರಾಜಾ ನಾಯ್ಕ ಕಡವಾಡ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ, ಕಾರವಾರ ನಗರ ಘಟಕ.