ಭಟ್ಕಳ (Bhatkal) : ಶಿರಸಿಯಲ್ಲಿ (Sirsi) ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮುರುಡೇಶ್ವರದ (Murudeshwar) ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ (RNS College) ಒಂಭತ್ತು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಯೋಗಿತಾ ನಾಯ್ಕ ೧೧೦ ಮೀ. ಹರ್ಡಲ್ಸ್, ೪×೧೦೦ ಮೀ. ರಿಲೇಯಲ್ಲಿ ಪ್ರಥಮ ಹಾಗೂ ೧೦೦ ಮೀ., ೨೦೦ ಮೀ. ರನ್ನಿಂಗ್ ದ್ವಿತೀಯ, ಹರ್ಷಿತಾ ನಾಯ್ಕ ಹ್ಯಾಮರ್ ಥ್ರೋನಲ್ಲಿ ಪ್ರಥಮ, ಚೈತ್ರ ನಾಯ್ಕ ಪೋಲ್ ವಾಲ್ಟ್ ಪ್ರಥಮ, ಅನಿಷಾ ಕರಾಟೆಯಲ್ಲಿ ಪ್ರಥಮ, ಕೌಶಿಕ್ ನಾಯ್ಕ ಕರಾಟೆಯಲ್ಲಿ ಪ್ರಥಮ, ಯೋಗರಾಜ ನಾಯ್ಕ ಯೋಗದಲ್ಲಿ ಪ್ರಥಮ, ಚೈತನ್ಯಾ ನಾಯ್ಕ ಲಾಂಗ್ ಜಂಪ್ ದ್ವಿತೀಯ, ಪ್ರೇಮಾ ದೇವಾಡಿಗ ಮತ್ತು ವನಿತಾ ಗೊಂಡ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉತ್ತರ ಕನ್ನಡ (Uttarakannada) ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ : ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕಾಂಶ ವಿತರಣೆಗೆ ಚಾಲನೆ

ಸಾಧನೆ ಮಾಡಿದ ಸ್ಪರ್ಧಾರ್ಥಿಗಳಿಗೆ ಆರ್.ಎನ್.ಎಸ್. ಆಡಳಿತ ಮಂಡಳಿ, ಆಡಳಿತ ಅಧಿಕಾರಿ ಡಾ. ದಿನೇಶ ಗಾಂವಕರ, ಆರೆನ್ನೆಸ್ ಕಾಲೇಜಿನ (RNS College) ಪ್ರಾಚಾರ್ಯೆ ಅಶ್ವಿನಿ ಶೇಟ, ದೈಹಿಕ ನಿರ್ದೇಶಕ ಮಹೇಶ ಗೊಂಡ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಮತ್ತೊಬ್ಬ ಮೀನುಗಾರ ಸಾವು; ಹೆಚ್ಚುತ್ತಿರುವ ಪ್ರಕರಣ