ಭಟ್ಕಳ (Bhatkal): ಇಲ್ಲಿನ ಶ್ರೀ ಗುರು ವಿದ್ಯಾಧಿರಾಜ (Vidyadhiraja) ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜು ಹಮ್ಮಿಕೊಂಡಿದ್ದ ತ್ರಿದಶಕ ವಿದ್ಯಾ ಮಹೋತ್ಸವ ಕಾರ್ಯಕ್ರಮದಲ್ಲಿ ಮುರ್ಡೇಶ್ವರದ ಆರ್.ಎನ್.ಎಸ್. ಪ್ರೌಢಶಾಲೆ (RNS Highschool) ಸಮಗ್ರ ವೀರಾಗ್ರಣಿ ಪಡೆದುಕೊಂಡಿದೆ.
ಇದನ್ನೂ ಓದಿ : ಧರ್ಮ, ವೇದಸಂರಕ್ಷಣೆಗೆ ಮಠಗಳು ಸಂಘಟಿತವಾಗಲಿ
ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜು ೩೦ ವರ್ಷಗಳನ್ನು ಪೂರೈಸಿದ ಪ್ರಯುಕ್ತ ತಾಲೂಕಿನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತ್ರಿದಶಕ ವಿದ್ಯಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ನಾರಾಯಣ ನಾಯ್ಕ, ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯ ಹಾಗೂ ಸಂಸ್ಕಾರಯುಕ್ತ ಮೌಲ್ಯಗಳು ಅತೀ ಅವಶ್ಯಕವಾದದು. ಈ ತರಹದ ಎಲ್ಲ ವಿಧದ ಬೆಳವಣಿಗೆಯನ್ನು ಮಕ್ಕಳಲ್ಲಿ ಅಭಿವೃದ್ಧಿ ಪಡಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ, ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಹಾಗೂ ಜ್ಙಾನ ಶಕ್ತಿ ಯಾಗಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಭಟ್ಕಳ ತಾಲೂಕಿನಲ್ಲಿ ಒಂದು ಅದ್ವಿತೀಯ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಹಿರಿಯ ಚಿತ್ರ ಕಲಾವಿದ ತೇಕು ತಾಂಡೇಲ ನಿಧನ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ವಿ. ನಾಯಕ ವಹಿಸಿದ್ದರು. ಟ್ರಸ್ಟಿ ಸುಮಿತ್ರಾ ಕೌಶಿಕ ಮತ್ತು ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ ಉಪಸ್ಥಿತರಿದ್ದರು.
ಇದನ್ನೂ ಓದಿ: ಆಟೋ ಚಾಲಕನ ಮೇಲೆ ಹಲ್ಲೆ, ಜೀವ ಬೆದರಿಕೆ
ನಂತರ ನಡೆದ ಗಣಿತ ಮಹೋತ್ಸವ, ವಿಜ್ಞಾನ ಮಹೋತ್ಸವ, ಜ್ಞಾನ ಮಹೋತ್ಸವ, ಸಂಗೀತ ಮಹೋತ್ಸವ ಮತ್ತು ಕಲಾ ಮಹೋತ್ಸವ ಸ್ಫರ್ಧೆಯಲ್ಲಿ ತಾಲೂಕಿನ ೧೬ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮುರ್ಡೇಶ್ವರದ ಆರ್.ಎನ್.ಎಸ್. ಪ್ರೌಢ ಶಾಲೆಯ (RNS Highschool) ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿಯನ್ನು ಮತ್ತು ಶಿರಾಲಿಯ ಸೆಂಟ್ ಥಾಮಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದುಕೊಂಡರು.
ಇದನ್ನೂ ಓದಿ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಹಿತ ೭ ಜನರ ವಿರುದ್ಧ ದೂರು ದಾಖಲು
ಬಹುಮಾನ ವಿತರಿಸಿ ಮಾತನಾಡಿದ ತೆರ್ನಮಕ್ಕಿ ಕರ್ನಾಟಕ ಪಬ್ಲಿಕ ಶಾಲೆಯ ಶಿಕ್ಷಕ ಗುಡ್ಡಪ್ಪ ಹರಿಜನ, ಜ್ಞಾನವಿಲ್ಲದೆ ಅಜ್ಙಾನದ ನಿವಾರಣೆ ಇಲ್ಲ. ಜ್ಙಾನ ಮತ್ತು ವಿಜ್ಞಾನ ಎರಡೂ ಆಧುನಿಕ ಕಾಲಕ್ಕೆ ಅತಿ ಅಗತ್ಯವಾಗಿದೆ. ಜ್ಞಾನ ಮತ್ತು ವಿಜ್ಞಾನಗಳೆರಡು ಧರ್ಮದ ಮೌಲ್ಯಗಳನ್ನು ಹೆಚ್ಚಿಸಿದರೆ ಅದು ನಿಜವಾದ ಶಿಕ್ಷಣ ಎಂದು ಹೇಳಿದರು.
ಇದನ್ನೂ ಓದಿ: ಹಲ್ಲೆ ಪ್ರಕರಣ; ಭಟ್ಕಳದಲ್ಲಿ ದೂರು – ಪ್ರತಿದೂರು ದಾಖಲು
ಟ್ರಸ್ಟಿ ರಮೇಶ ಖಾರ್ವಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಜಯಂತ ನಾಯ್ಕ ಸ್ವಾಗತಿಸಿದರು. ವಿಧಾತ್ರಿ ಭಟ್ ವಂದಿಸಿದರು. ಲಾವಣ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಶಿವಾನಂದ ಭಟ್, ನಾಗೇಂದ್ರ ಪೈ, ಚೇತನಾ ನಾಯ್ಕ ಮತ್ತು ಸಿಂಚನಾ ನಾಯ್ಕ ನಿರೂಪಿಸಿದರು.
ಇದನ್ನೂ ಓದಿ: ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ