ಭಟ್ಕಳ (Bhatkal): ಮುರ್ಡೇಶ್ವರದ (Murdeshwar) ಆರ್ ಎನ್ ಶೆಟ್ಟಿ (RNS) ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನ (Childrens day) ಹಾಗೂ ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ವೃದ್ಧಿಸುವ ಸಲುವಾಗಿ ಮಾರುಕಟ್ಟೆ ದಿನವನ್ನು (Market Day) ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮಕ್ಕೆ ಆರ್.ಎನ್.ಎಸ್. (RNS) ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಡಾ.ದಿನೇಶ ಗಾಂವಕರ ಮತ್ತು ಆರ್.ಎನ್. ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಅಶ್ವಿನಿ ಶೇಟ ಚಾಲನೆ ನೀಡಿದರು. ಸ್ವತಃ ವಿದ್ಯಾರ್ಥಿಗಳೇ ಹಲವಾರು ಮಳಿಗೆಗಳನ್ನು ನಿರ್ಮಿಸಿ ವಿವಿಧ ವಸ್ತುಗಳನ್ನು, ತಿಂಡಿ-ತಿನಿಸುಗಳನ್ನು ಮಾರಾಟ ಮಾಡಿದರು. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ವತಿಯಿಂದ “ತಂಬಾಕು ಮುಕ್ತ ಯುವ ಅಭಿಯಾನ ೨.೦” ಅಂಗವಾಗಿ ತಂಬಾಕು ವಿರುದ್ಧ ಪ್ರತಿಜ್ಞಾವಿಧಿ ಹಾಗೂ ಪ್ರತಿಯೊಂದು ಮಳಿಗೆಗಳ ಮುಂದೆ ತಂಬಾಕಿನ ವಿರುದ್ಧ ಬಿತ್ತಿ ಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಆರ್.ಎನ್.ಎಸ್. ಸಹೋದರ ಶಿಕ್ಷಣ ಸಂಸ್ಥೆಗಳಿಂದ, ಸ್ಥಳೀಯರಿಂದ, ಹಳೆಯ ವಿದ್ಯಾರ್ಥಿಗಳಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಯಿತು.
ಇದನ್ನೂ ಓದಿ : ಉಡುಪಿ ಆರೋಪಿ ಕಾರವಾರದಲ್ಲಿ ಬಂಧನ